ವಿಕ್ರಮ್ ಭಟ್ ಸಿನೆಮಾ ಸ್ಕ್ರಿಪ್ಟ್ ಗಳು ಈಗ ಕಾದಂಬರಿ ರೂಪದಲ್ಲಿ

ನೆಮಾ ನಿರ್ದೇಶಕ ವಿಕ್ರಮ್ ಭಟ್
ವಿಕ್ರಮ್ ಭಟ್
ವಿಕ್ರಮ್ ಭಟ್
Updated on

ನವದೆಹಲಿ: ಸಿನೆಮಾ ನಿರ್ದೇಶಕ ವಿಕ್ರಮ್ ಭಟ್ ಅವರ ಮೂರು ಸಿನೆಮಾ ಸ್ಕ್ರಿಪ್ಟ್ ಗಳು, ಕಾಮೋಶಿಯಾ ಕೂಡ ಒಳಗೊಂಡಂತೆ ಇನ್ನು ಮುಂದೆ ಕಾದಂಬರಿ ರೂಪದಲ್ಲಿ ದೊರೆಯಲಿವೆ.

"ಕಾಮೋಶಿಯಾ"ದ ಈ ಲೇಖಕ ಇದರಿಂದ ಥ್ರಿಲ್ ಆಗಿದ್ದಾರೆ. ಇದಲ್ಲದೆ ಅವರ ಇನ್ನೆರಡು ಚಿತ್ರಗಳ "೧೯೨೦" ಮತ್ತು "೧೯೨೦ - ಈವಿಲ್ ರಿಟರ್ನ್ಸ್" ಸ್ಕ್ರಿಪ್ಟ್ ಗಳು ಕೂಡ ಕಾದಂಬರಿ ರೂಪದಲ್ಲಿ ಲಭ್ಯವಾಗಲಿವೆ. ಈ ಹಿಂದೆ ಎಲ್ಲೂ ತೋರಿಸಿದ ಚಿತ್ರಗಳು ಹಾಗೂ ಹಲವಾರು ಹೊಸ ಸಂಗತಿಗಳು ಈ ಕಾದಂಬರಿಗಳಲ್ಲಿ ಸಿಗಲಿವೆ ಎಂದಿದ್ದಾರೆ ವಿಕ್ರಮ್ ಭಟ್.

"ನಾನು ಥ್ರಿಲ್ ಆಗಿದ್ದೇನೆ ಏಕೆಂದರೆ, ಸಾಮಾನ್ಯವಾಗಿ ನಾನು ಸ್ಕ್ರಿಪ್ಟ್ ಬರೆದಿರುವ ಈ ಸಿನೆಮಾಗಳಿಗೆ ಸೆನ್ಸಾರ್ ನಿಂದ ಎ-ರೇಟಿಂಗ್ ಇರುತ್ತದೆ. ಈಗ ಪುಸ್ತಕಗಳು ಹೊರಬರುತ್ತಿರುವುದರಿಂದ ಯುವಕರು ಕೂಡ ನನ್ನ ಕಥೆಗಳನ್ನು ಓದಲಿದ್ದಾರೆ" ಎಂದು ಭಟ್ ಹರ್ಷ ವ್ಯಕ್ತಪಡಿಸಿದ್ದಾರೆ.

ಜನವರಿ ಕೊನೆಯಲ್ಲಿ ಈ ಪುಸ್ತಕಗಳು ಹೊರಬೀಳಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com