ಶಾರೂಖ್ ಕ್ಷಮೆಯಾಚಿಸಿದ ಬಚ್ಚನ್ ಕುಟುಂಬ

ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಕುಟುಂಬ ಬಾಲಿವುಡ್ ಬಾದ್‌ಶಾ...
ಶಾರೂಖ್   ಕ್ಷಮೆಯಾಚಿಸಿದ ಬಚ್ಚನ್ ಕುಟುಂಬ

ನವದೆಹಲಿ: ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಕುಟುಂಬ ಬಾಲಿವುಡ್ ಬಾದ್‌ಶಾ ಶಾರೂಖ್ ಖಾನ್ ಅವರನ್ನು ಕ್ಷಮೆಯಾಚಿಸಿದೆ.

'ಹ್ಯಾಪಿ ನ್ಯೂ ಇಯರ್' ಚಿತ್ರ ಕುರಿತು ಜಯಾ ಬಚ್ಚನ್ ನೀಡಿದ್ದ ಹೇಳಿಕೆ ಹಿನ್ನೆಲೆ, ಬಚ್ಚನ್ ಕುಟುಂಬ ಶಾರೂಖ್ ಖಾನ್ ಅವರನ್ನು ಕ್ಷಮೆ ಕೋರಿದೆ.

ಹ್ಯಾಪಿ ನ್ಯೂ ಇಯರ್ ಚಿತ್ರ ವಿವೇಚನೆ ಇಲ್ಲದ್ದು ಎಂದು ಅಮಿತಾಬ್ ಬಚ್ಚನ್ ಪತ್ನಿ ಹಾಗೂ ಬಾಲಿವುಡ್ ಹಿರಿಯ ನಟಿ ಜಯಾ ಬಚ್ಚನ್ ಹೇಳಿಕೆ ನೀಡಿದ್ದರು.

ಅಭಿಷೇಕ್ಬಚ್ಚನ್ ಚಿತ್ರದಲ್ಲಿ ಅಭಿನಯಿಸಿರುವ ಕಾರಣ, ಹ್ಯಾಪಿ ನ್ಯೂ ಇಯರ್ ಚಿತ್ರವನ್ನು ವೀಕ್ಷಿಸಿದ್ದೇನೆ. ಆದರೆ, ಈ ಚಿತ್ರ ನಿಜವಾಗಿ ವಿವೇಚನೆ ಇಲ್ಲದ್ದಾಗಿದೆ ಎಂದು ಹೇಳಿದ್ದರು. ಬಚ್ಚನ್ ಅವರ ಹೇಳಿಕೆ ಶಾರೂಖ್ ಖಾನ್ ಮತ್ತು ಚಿತ್ರ ತಂಡಕ್ಕೆ ನೋವುಂಟು ಮಾಡಿದೆ ಎಂಬ ಹಿನ್ನಲೆಯಲ್ಲಿ ಬಚ್ಚನ್ ಕುಟುಂಬ ಕ್ಷಮೆಯಾಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com