ರಾಹುಲ್ ಶರ್ಮಾ ಜತೆ ಆಸಿನ್ ಮದುವೆ

ಸದ್ಯ 'ಆಲ್ ಇಸ್ ವೆಲ್‌' ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ದಕ್ಷಿಣ ಭಾರತದ ಖ್ಯಾತ ನಟಿ, ಮಲೆಯಾಳಿ ಬೆಡಗಿ ಆಸಿನ್ ಅವರು ಶೀಘ್ರದಲ್ಲೇ ಮೈಕ್ರೋ ಮ್ಯಾಕ್ಸ್ ಮೊಬೈಲ್...
ಆಸಿನ್ - ರಾಹುಲ್ ಶರ್ಮಾ
ಆಸಿನ್ - ರಾಹುಲ್ ಶರ್ಮಾ

ಸದ್ಯ 'ಆಲ್ ಇಸ್ ವೆಲ್‌' ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ದಕ್ಷಿಣ ಭಾರತದ ಖ್ಯಾತ ನಟಿ, ಮಲೆಯಾಳಿ ಬೆಡಗಿ ಆಸಿನ್ ಅವರು ಶೀಘ್ರದಲ್ಲೇ ಮೈಕ್ರೋ ಮ್ಯಾಕ್ಸ್ ಮೊಬೈಲ್ ಕಂಪನಿಯ ಸ್ಥಾಪಕ ರಾಹುಲ್ ಶರ್ಮಾ ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರಂತೆ.

ವರದಿಗಳ ಪ್ರಕಾರ, ಕಳೆದ ಕೆಲವು ವರ್ಷಗಳಿಂದ ರಾಹುಲ್ ಹಾಗೂ ಆಸಿನ್ ಪರಸ್ಪರ ಪ್ರೀತಿಸುತ್ತಿದ್ದು, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಬಾಲಿವುಡ್‌ಗೆ ವಿದಾಯ ಹೇಳುತ್ತಿದ್ದಾರಂತೆ.

ಇನ್ನು ಮದುವೆ ಸುದ್ದಿಯನ್ನು ಖಚಿತಪಡಿಸಿರುವ ಆಸಿನ್, ನಾನು ಈಗ ನನ್ನ ವೈಯಕ್ತಿಕ ಜೀವನಕ್ಕೆ ಹೆಚ್ಚು ಸಮಯ ಕೊಡಬೇಕಾಗಿದ್ದು, ಕಳೆದ ಎರಡು ವರ್ಷಗಳಿಂದ ಯಾವುದೇ ಹೊಸ ಚಿತ್ರಗಳಿಗೆ ಸಹಿ ಹಾಕಿಲ್ಲ ಎಂದಿದ್ದಾರೆ.

ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿರುವ ಆಸಿನ್ ಮದುವೆ ಸುದ್ದಿ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com