ನಾನೀಗ ಸಿಂಗಲ್ ಬಿಪಾಶಾ

ಮೋಹಕ ನೋಟ, ಮಾದಕ ಮೈಮಾಟದಿಂದ ಪಡ್ಡೆಗಳ ಹಾಟ್ ಫೇವರಿಟ್ ಆಗಿದ್ದ ಬಿಪಾಶಾ ಅದೇ ಪಡ್ಡೆಗಳಿಗೆ ಹಾರ್ಟ್ ಬ್ರೇಕಿಂಗ್ ಸುದ್ದಿ ಕೊಟ್ಟಿದ್ದು ಜಾನ್ ಅಬ್ರಹಾಂ ಜತೆ ಲವ್ವಲ್ಲಿ ಬಿದ್ಮೇಲೆ...
ಬಿಪಾಶಾ ಬಸು
ಬಿಪಾಶಾ ಬಸು

ಮೋಹಕ ನೋಟ, ಮಾದಕ ಮೈಮಾಟದಿಂದ ಪಡ್ಡೆಗಳ ಹಾಟ್ ಫೇವರಿಟ್ ಆಗಿದ್ದ ಬಿಪಾಶಾ ಅದೇ ಪಡ್ಡೆಗಳಿಗೆ ಹಾರ್ಟ್ ಬ್ರೇಕಿಂಗ್ ಸುದ್ದಿ ಕೊಟ್ಟಿದ್ದು ಜಾನ್ ಅಬ್ರಹಾಂ ಜತೆ ಲವ್ವಲ್ಲಿ ಬಿದ್ಮೇಲೆ.

ಹೋದಲ್ಲೆಲ್ಲಾ ಜಾನ್ ತೋಳಲ್ಲಿ ಬಂಧಿಯಾಗಿ ಪೋಸ್ ಕೊಡ್ತಿದ್ದ ಬಿಪಾಶಾ, ಇನ್ನೇನು ಜಾನ್ ಜತೆ ಹಸೆಮಣೆ ಏರಬೇಕು ಅನ್ನುವಷ್ಟರಲ್ಲಿ ಬ್ರೇಕಪ್ ಸುದ್ದಿ ನೀಡಿದ್ದಳು. ಇತ್ತ ಬಿಪಾಶಾ ತೆಕ್ಕೆಯಿಂದ ಹೊರಬಂದ ಮೇಲೆ ಹಳೇ ಗೆಳತಿ ಪಾದವೇ ಗತಿ ಅಂತ ಜಾನ್, ಪ್ರಿಯಾ ರಾಂಚಲ್ ಜತೆ ಹಸೆಮಣೆ ಏರಿದರು. ಇತ್ತ ಬಿಪಾಶಾ ಹರ್ಮನ್ ಬವೇಜಾ ಜತೆ ಪ್ರೀತಿ ಪ್ರೇಮ ಶುರುಹಚ್ಕೊಂಡ್ಳು.

ಡಿಶ್ಕ್ಯಾವ್ ಚಿತ್ರದಲ್ಲಿ ಒಂದಾಗಿದ್ದ ಈ ಜೋಡಿ, ನಿಜ ಜೀವನದಲ್ಲೂ ಜೋಡಿಯಾಗುವುದಕ್ಕೆ ನಿರ್ಧರಿಸಿದ್ದರು. ನಾವಿಬ್ಬರು ಕಪಲ್ ಅತ ಓಪನ್ ಆಗಿ ಅನೌನ್ಸ್ ಮಾಡಿದ್ದ ಬಿಪಾಶಾ, ಇದೀಗ ಹರ್ಮನ್ ಜತೆಗೂ ಬ್ರೇಕಪ್ ಮಾಡಿಕೊಂಡಿದ್ದಾಳೆ. ನನ್ನ ನಿರ್ಧಾರ ಬೇಸರ ತಂದಿಲ್ಲ. ನೋವಲ್ಲಿ ಬದುಕುವುದಕ್ಕಿಂತ, ಜೀವನ ಸಾಗಿಸುವುದು ಮುಖ್ಯ. ಹರ್ಮನ್ ಒಳ್ಳೆಯ ಹುಡುಗ. ಆದ್ರೆ, ನಾವಿಬ್ಬರು ಜತೆಯಾಗಿರುವುದು ಕಷ್ಟ ನಾನೀಗ ಸಿಂಗಲ್ ಅಂತ ಬಿಪಾಶಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com