ಜಾಕ್ವೆಲಿನ್‍ಳ ಫಿಟ್ನೇಸ್ ಗುಟ್ಟು, ರಟ್ಟು

ಬಾಗಿ ಬಳುಕುವ ದೇಹಸಿರಿ ಹೊಂದುವುದಕ್ಕಾಗಿ ಸಿನೆಮಾ ನಟಿಯರು ಡಯಟ್, ಜಿಮ್, ವರ್ಕ್ ಔಟ್ ಎಂದು ಮಾಡುವ ಕಸರತ್ತು ಒಂದೆರಡಲ್ಲ. ಆದರೆ..
ನಟಿ ಜಾಕ್ವೆಲಿನ್ ಫರ್ನಾಂಡಿಸ್
ನಟಿ ಜಾಕ್ವೆಲಿನ್ ಫರ್ನಾಂಡಿಸ್
Updated on: 

ಬಾಗಿ ಬಳುಕುವ ದೇಹಸಿರಿ ಹೊಂದುವುದಕ್ಕಾಗಿ ಸಿನೆಮಾ ನಟಿಯರು ಡಯಟ್, ಜಿಮ್, ವರ್ಕ್ ಔಟ್ ಎಂದು ಮಾಡುವ ಕಸರತ್ತು ಒಂದೆರಡಲ್ಲ. ಆದರೆ, ಇದ್ಯಾವುದನ್ನೂ ಮಾಡದೆ ಮಾದಕ ದೇಹ ಹೊಂದಿರುವ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಎಂದರೆ ನೀವು ನಂಬಲೇಬೇಕು.
ಜಾಕ್ವೆಲಿನ್ ಇಷ್ಟ ಬಂದದ್ದನ್ನೆಲ್ಲ ಹೊಟ್ಟೆತುಂಬ ತಿಂದು ಕೂಡ ಸುಂದರ ದೇಹದ ಒಡತಿಯಾಗಿದ್ದಾಳೆ. ನೀಳ ಕಾಲುಗಳ, ಯಾರು ಕೂಡ ಅಸೂಯೇ ಪಡುವಂತಹ ಸೌಂದರ್ಯದ ಗುಟ್ಟನ್ನು ಜಾಕ್ವೆಲಿನ್ ಬಹಿರಂಗಪಡಿಸಿದ್ದಾಳೆ.
ಕುದುರೆ ಸವಾರಿ ಎಂದರೆ ಎಷ್ಟೋ ಜನಪ್ರಿಯ ನಾಯಕರು ಹಿಂದೆಮುಂದೆ ನೋಡುತ್ತಾರೆ. ಇಲ್ಲದಿದ್ದರೆ ಡ್ಯೂಪ್ ಗಳನ್ನು ಬಳಸುತ್ತಾರೆ. ಆದರೆ ಜಾಕ್ವೆಲಿನ್‍ಗೆ ಮಾತ್ರ ಕುದುರೆ ಸವಾರಿ
ಎಂದರೆ ಅಚ್ಚುಮೆಚ್ಚಂತೆ. ನಾಲ್ಕೈದು ತಾಸು ಕುದುರೆ ಸವಾರಿ ಮಾಡಿದರೆ ಎಂತಹ ಕೊಬ್ಬು ಕೂಡ ಕರಗಿ ಬೆವರಾಗಿ ಹರಿಯುತ್ತದೆ ಎಂಬುದು ಅವಳ ವಾದ. ವಾರಕ್ಕೆ ಕನಿಷ್ಠ ಎರಡು ಸಲ ಕುದುರೆ ಸವಾರಿ ಮಾಡಿದರೆ ಬೇರೆ ಯಾವ ವ್ಯಾಯಾಮದ ಅಗತ್ಯವೂ ಇಲ್ಲ ಎನ್ನುವುದು ಜಾಕಿಯ ಅನುಭವ ಮಾತು. ಹೀಗಾಗಿಯೇ ಅವಳು ತಿನ್ನುವುದಕ್ಕೆ ಹಿಂದೆಮುಂದೆ ನೋಡುವುದಿಲ್ಲ. ಉತ್ತಮ ಫಿಟ್‍ನೆಸ್ ಹೊಂದಿದ್ದರೆ ಮಾತ್ರ ಉತ್ತಮ ಆರೋಗ್ಯ ಇರುತ್ತದೆ ಎನ್ನುವುದು ಜಾಕಿ ನಿಮಗೆ ನೀಡುವ ಸಲಹೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com