ಕರೀಷ್ಮಾಗೆ ಇನ್ನೂ ಡೈವೋರ್ಸ್ ಸಿಕ್ಕಿಲ್ಲ!

ಕರೀಷ್ಮಾ ಕಪೂರ್ ತನ್ನ ಪತಿ ಸಂಜಯ್ ಕಪೂರ್‍ನಿಂದ ದೂರವುಳಿದು ಕೆಲ ಕಾಲ ಆಯಿತು. ಗಂಡನೇ ಒಂದು ಮನೆಯಲ್ಲಿ, ಹೆಂಡ್ತಿ ಮತ್ತೊಂದು ಮನೆಯಲ್ಲಿದ್ದಾರೆ. ಒಂದು ವರುಷದಿಂದ...
ಕರೀಷ್ಮಾ ಕಪೂರ್
ಕರೀಷ್ಮಾ ಕಪೂರ್
ಕರೀಷ್ಮಾ ಕಪೂರ್ ತನ್ನ ಪತಿ ಸಂಜಯ್ ಕಪೂರ್‍ನಿಂದ ದೂರವುಳಿದು ಕೆಲ ಕಾಲ ಆಯಿತು. ಗಂಡನೇ ಒಂದು ಮನೆಯಲ್ಲಿ, ಹೆಂಡ್ತಿ ಮತ್ತೊಂದು ಮನೆಯಲ್ಲಿದ್ದಾರೆ. ಒಂದು ವರುಷದಿಂದ ಡೈವೋರ್ಸ್‍ಗೆ ಯತ್ನಿಸುತ್ತಲೇ ಇದ್ದಾರೆ. ಆದರೆ, ಇನ್ನೂ ಸಿಕ್ಕಿಲ್ಲ. ಸಂಜಯ್ ಗೆ ಪ್ರಿಯಾ ಚಟ್ವಾಲ್ ಎಂಬಾಕೆಯ ಜೊತೆ ಅಫೈರ್ ಇದೆ ಎಂಬ ಕಾರಣಕ್ಕೆ ಕರೀಷ್ಮಾ ದೂರ ಆಗಿದ್ದಳು. ಆದರೆ, ಕರೀಷ್ಮಾಗೆ ಡೈವೋರ್ಸ್ ಕೊಡಿಸಲು ಸಂಜಯ್ ನ ಅಮ್ಮನಿಗೆ ಇಷ್ಟ ಇಲ್ವಂತೆ. ಸಂಜಯ್ ತಾಯಿ ರಾಣಿ ಕಪೂರ್ ಈಗ ಕುಟುಂಬವನ್ನು ಮ್ಯಾನೇಜ್ ಮಾಡುತ್ತಿದ್ದಾರಂತೆ. ಹಣಕಾಸಿನ ಆಗುಹೋಗುಗಳನ್ನೆಲ್ಲ ಸಂಜಯ್, ಅಮ್ಮನ ಬಳಿಯೇ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಾದ ಪರಿಸ್ಥಿತಿಯಿದೆ. ಕರೀಷ್ಮಾಳನ್ನು ಮತ್ತೆ ಮನೆಯೊಳಗೆ ಕರೆಸಿಕೊಳ್ಳಬೇಕು, ಮಗ ನೆಟ್ಟಗಾಗಬೇಕೆಂಬ ಆಸೆ ಅತ್ತೆಯದ್ದು. ಅಂದಹಾಗೆ, ಸಂಜಯ್- ಕರೀಷ್ಮಾಗೆ 2 ಮಕ್ಕಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com