ಇಮ್ರಾನ್ ಹಶ್ಮಿಯ ಹಳೆ ಇಮೇಜ್ ಕಳಚುತ್ತಾ?

ಸಾಕು ಈ ಕಿಸ್ ಸಹವಾಸ! ಸೀರಿಯಲ್ ಕಿಸ್ಸರ್ ಇಮ್ರಾನ್ ಹಶ್ಮಿಗೆ ಈ ಕಿಸ್ ಸಹವಾಸ ಸಾಕಾಗಿದೆ. ಈಗ ಅವರಿಗೆ ತಮ್ಮ ತಪ್ಪಿನ...
ಇಮ್ರಾನ್ ಹಶ್ಮಿ
ಇಮ್ರಾನ್ ಹಶ್ಮಿ
Updated on

ಸಾಕು ಈ ಕಿಸ್ ಸಹವಾಸ! ಸೀರಿಯಲ್ ಕಿಸ್ಸರ್ ಇಮ್ರಾನ್ ಹಶ್ಮಿಗೆ ಈ ಕಿಸ್ ಸಹವಾಸ  ಸಾಕಾಗಿದೆ. ಈಗ ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ. ಹೀಗಾಗಿ ಈ ಕಿಸ್ ಸಹವಾಸವೇ  ಸಾಕು ಅಂಥ ನಿರ್ಧರಿಸಿದಂತೆ ಕಾಣುತ್ತಿದೆ.

ಹಳೇ ಇಮೇಜ್ ನಿಂದ ಹೊರಬರುತ್ತಿದ್ದೇನೆ. ಮತ್ತೊಂದು ಇಮೇಜ್ ನಲ್ಲಿ ನನ್ನನ್ನು ನಾನು ತೋರಿಸಿಕೊಳ್ಳುವುದು ಅಗತ್ಯವಿದೆ. ಇದಕ್ಕಾಗಿ ಶ್ರಮಪಡುತ್ತಿದ್ದೇನೆ ಎಂದು ಇಮ್ರಾನ್  ಳಿಕೊಂಡಿದ್ದಾರೆ. ಆದರೆ, ತಮ್ಮ ರೊಮ್ಯಾನ್ಸ್ ಬ್ರಾಂಡ್ ಇಮೇಜ್ ಅನ್ನು  ಹಾಗೆ  ಉಳಿಸಿಕೊಂಡಿದ್ದಾರೆ.

`ಮೈ ರಹ್ಹೋ, ಯ ನಾ ರಹ್ಹೋ' ಚಿತ್ರದ ಮ್ಯೂಜಿಕ್ ವಿಡಿಯೋ ಆಲ್ಬಂ ಕುರಿತು  ಧ್ಯಮದವರೊಂದಿಗೆ ಮಾತನಾಡಿರುವ ಇಮ್ರಾನ್, ತಮ್ಮ ಕೆರಿಯರ್  ಬಗ್ಗೆಯೂ ಮನಬಿಚ್ಚಿ  ಹೇಳಿಕೊಂಡಿದ್ದಾರೆ. `ಸಾಕು ಈ ಹಳೇ ಇಮೇಜ್‍ನ ಪ್ರಸ್ತಾಪ ಬೇಡ. ನಾನೀಗ ಬದಲಾಗುತ್ತಿದ್ದೇನೆ'  ಎಂದಿರುವುದು ಆಚ್ಚರಿ ತರಿಸಿದೆ. ಹಶ್ಮಿ ಹಾಗೂ ಇಷಾ ಗುಪ್ತಾ ಈ ವಿಡಿಯೋ  ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com