ಆಮೀರ್ ಖಾನ್ ರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಮುಂದುವರಿಸದಿರಲು ಸ್ನ್ಯಾಪ್ ಡೀಲ್ ನಿರ್ಧಾರ

ಬಾಲಿವುಡ್ ನಟ ಆಮೀರ್ ಖಾನ್ ಅವರನ್ನು ಸ್ನ್ಯಾಪ್ ಡೀಲ್ ರಾಯಭಾರಿಯನ್ನಾಗಿ ಮುಂದುವರಿಸದಿರಲು ಕಂಪನಿ ತೀರ್ಮಾನಿಸಿದೆ....
ಆಮೀರ್ ಖಾನ್
ಆಮೀರ್ ಖಾನ್

ನವದೆಹಲಿ: ಬಾಲಿವುಡ್ ನಟ ಆಮೀರ್ ಖಾನ್ ಅವರನ್ನು ಸ್ನ್ಯಾಪ್ ಡೀಲ್ ರಾಯಭಾರಿಯನ್ನಾಗಿ ಮುಂದುವರಿಸದಿರಲು ಕಂಪನಿ ತೀರ್ಮಾನಿಸಿದೆ.

ಈ ಹಿಂದೆ ಆಮೀರ್ ಖಾನ್ ಜೊತೆ ಸ್ನ್ಯಾಪ್ ಡೀಲ್ ಮಾಡಿಕೊಂಡಿದ್ದ ಕರಾರನ್ನು ವಾಪಸ್ ತೆಗೆದುಕೊಳ್ಳಲು ಕಂಪನಿ ನಿರ್ಧರಿಸಿದ್ದು, ಕರಾರನ್ನು ನವೀಕರಣ ಮಾಡಿಕೊಳ್ಳದಂತೆ ನಿರ್ಧಾರ ತೆಗೆದುಕೊಂಡಿದೆ.

ಫೆಬ್ರವರಿ ಅಂತ್ಯಕ್ಕೆ ಆಮೀರ್ ಖಾನ್ ಮತ್ತು ಸ್ನ್ಯಾಪ್ ಡೀಲ್ ನಡುವಿನ ಒಪ್ಪಂದ ಅಂತ್ಯಗೊಳ್ಳಲಿದೆ, ಇನ್ನೂ ಆಮೀರ್ ಜಾಗಕ್ಕೆ ಬೇರೆ ಯಾರನ್ನು ಕರೆ ತರುತ್ತಾರೆ ಎಂಬುದನ್ನು ಕಂಪನಿ ರಹಸ್ಯವಾಗಿ ಇಟ್ಟಿದೆ.

ಕಳೆದ ವರ್ಷ ಅಸಹಿಷ್ಣುತೆ ಬಗ್ಗೆ ಹೇಳಿಕೆ ನೀಡಿ ತೀವ್ರ ವಿವಾದ ಸೃಷ್ಟಿಸಿದ್ದ ಆಮೀರ್ ಖಾನ್ ರನ್ನು ಸ್ನ್ಯಾಪ್ ಡೀಲ್ ರಾಯಭಾರಿಯಾಗಿ ಮತ್ತೆ ಮುಂದುವರಿಸಲು ಕಂಪನಿ ಹಿಂದೇಟು ಹಾಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com