ಆಸ್ಕರ್: ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಪದ ಡಿ ಕಾಪ್ರಿಯೋ, ಪ್ರಿಯಾಂಕಾ ಚೋಪ್ರಾ

ಭಾನುವಾರ ಲಾಸ್ ಏಂಜಲೀಸ್‌ನಲ್ಲಿ ನಡೆದ 88ನೇ ಅಕಾಡೆಮಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ...
ಲಿಯಾನಾರ್ಡೋ ಡಿ ಕಾಪ್ರಿಯೋ- ಪ್ರಿಯಾಂಕಾ ಚೋಪ್ರಾ
ಲಿಯಾನಾರ್ಡೋ ಡಿ ಕಾಪ್ರಿಯೋ- ಪ್ರಿಯಾಂಕಾ ಚೋಪ್ರಾ
Updated on: 
ಲಾಸ್ ಏಂಜಲೀಸ್:  ಭಾನುವಾರ ಲಾಸ್ ಏಂಜಲೀಸ್‌ನಲ್ಲಿ ನಡೆದ 88ನೇ ಅಕಾಡೆಮಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ಪ್ರಸ್ತುತ ಕಾರ್ಯಕ್ರಮದಲ್ಲಿ ಗಮನ ಸೆಳೆದದ್ದು ಮಾತ್ರವಲ್ಲದೆ ಗೂಗಲ್‌ನಲ್ಲಿಯೂ ಟ್ರೆಂಡಿಂಗ್ ಆಗಿದ್ದಾರೆ.
ಭಾನುವಾರ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪಡೆದ ಲಿಯಾನಾರ್ಡೋ ಡಿ ಕಾಪ್ರಿಯೋ ಅವರ ಹೆಸರು ಗೂಗಲ್ ಟ್ರೆಂಡ್‌ಗಳಲ್ಲಿ ಪ್ರಥಮ ಸ್ಥಾನ ಪಡೆದರೆ, ಪ್ರಿಯಾಂಕಾ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಂದರೆ ಭಾನುವಾರ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಪದ ಡಿ ಕಾಪ್ರಿಯೋ ಆಗಿದ್ದು, ನಂತರದ ಸ್ಥಾನ ಪ್ರಿಯಾಂಕಾ ಚೋಪ್ರಾ ಹೆಸರಿಗಿದೆ.
ಈಗಾಗಲೇ ಟಿವಿ ಶೋ ಕ್ವಾಟಿಂಕೋ ಮೂಲಕ ಬಾರೀ ಸುದ್ದಿಯಾಗಿದ್ದ ಪ್ರಿಯಾಂಕಾ ಡ್ವೇನ್ ಜಾನ್ಸನ್ ಜತೆ ಬೇವಾಚ್ ಎಂಬ ಸಿನಿಮಾ ಮೂಲಕ ಹಾಲಿವುಡ್‌ಗೆ ಎಂಟ್ರಿ ನೀಡಿದ್ದಾರೆ.
ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಜುಹೈರ್ ಮುರಾದ್ ವಿನ್ಯಾಸ ಮಾಡಿದ ಗೌನ್ ಧರಿಸಿ ಸ್ಟೈಲಿಷ್ ಆಗಿ ಕಾಣಿಸಿಕೊಂಡ ಪ್ರಿಯಾಂಕಾ ಎಲ್ಲರ ಗಮನ ಸೆಳೆದಿದ್ದರು.
ಸರ್ಚ್ ಇಂಜಿನ್ ದೈತ್ಯ ಗೂಗಲ್ ಪ್ರಕಾರ ಗೂಗಲ್‌ನಲ್ಲಿ ರೆಡ್ ಕಾರ್ಪೆಟ್ ಡ್ರೆಸ್ ಎಂಬ ಕೀವರ್ಡ್‌ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಹಾಲಿವುಡ್ ನಟಿ ಒಲಿವಿಯಾ ವೈಲ್ಡ್ ಅವರ ನಂತರದ ಸ್ಥಾನವನ್ನು ಪ್ರಿಯಾಂಕಾ ಗಿಟ್ಟಿಸಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com