ಸಂದರ್ಶಕರು ಸನ್ನಿ ವೃತ್ತಿ ಬದುಕಿನ ಹಾಗೂ ವೈಯಕ್ತಿಕ ಬದುಕಿನ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಆ ಎಲ್ಲಾ ಪ್ರಶ್ನೆಗಳಿಗೂ ಆಕೆ ಸಮರ್ಪಕವಾಗಿಯೇ ಉತ್ತರಿಸಿದ್ದಳು. ಇದನ್ನು ಬಾಲಿವುಡ್ನ ಅನುಷ್ಕಾ ಶರ್ಮಾ, ಅಲಿಯಾ ಭಟ್, ರಿಷಿ ಕಪೂರ್, ವಿದ್ಯಾಬಾಲನ್ ಸೇರಿದಂತೆ ಹಲವಾರು ನಟ ನಟಿಯರು ಮೆಚ್ಚಿಕೊಂಡಿದ್ದರು. ಆದರೆ ಆಮೀರ್ ಖಾನ್ ಮಾತ್ರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.