ಇನ್ ಕ್ರೆಡಿಬಲ್ ಇಂಡಿಯಾ ರಾಯಭಾರಿಯಾಗಿ ಬಿಗ್ ಬಿ-ಪ್ರಿಯಾಂಕ ಆಯ್ಕೆ

ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಕಾರ್ಯಕ್ರಮ ಇನ್ ಕ್ರೆಡಿಬಲ್ ಇಂಡಿಯಾ ಅಭಿಯಾನದ ರಾಯಭಾರಿ ಯಾರಾಗುತ್ತಾರೆಂಬ ಅಂತೆ ಕಂತೆಗಳಿಗೆ ಕೊನೆಗೂ ತೆರೆಬಿದ್ದಿದ್ದು...
ಪ್ರಿಯಾಂಕ ಚೋಪ್ರಾ-ಅಮಿತಾಬ್ ಬಚ್ಚನ್
ಪ್ರಿಯಾಂಕ ಚೋಪ್ರಾ-ಅಮಿತಾಬ್ ಬಚ್ಚನ್

ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಕಾರ್ಯಕ್ರಮ ಇನ್ ಕ್ರೆಡಿಬಲ್ ಇಂಡಿಯಾ ಅಭಿಯಾನದ ರಾಯಭಾರಿ ಯಾರಾಗುತ್ತಾರೆಂಬ ಅಂತೆ ಕಂತೆಗಳಿಗೆ ಕೊನೆಗೂ ತೆರೆಬಿದ್ದಿದ್ದು, ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಪ್ರಿಯಾಂಕ ಚೋಪ್ರಾ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆ ಬಾಕಿ ಇದೆ.

ಅಸಹಿಷ್ಣುತೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ದೇಶಾದ್ಯಂತ ಕೋಲಾಹಲಕ್ಕೆ ಕಾರಣನಾಗಿದ್ದ ಬಾಲಿವುಡ್ ನಟ ಆಮೀರ್ ಖಾನ್ ರಾಯಭಾರಿ ಸ್ಥಾನದಿಂದ ತೆಗೆದು ಹಾಕಲಾಗಿತ್ತು. ಇದೀಗ ಇನ್ ಕ್ರೆಡಿಬಲ್ ಇಂಡಿಯಾಗೆ ಅಮಿತಾಬ್ ಬಚ್ಚನ್ ಹಾಗೂ ಪ್ರಿಯಾಂಕ ಚೋಪ್ರ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com