ಪಿತೂರ್ ಚಿತ್ರಕ್ಕಾಗಿ ರು.50 ಲಕ್ಷ ವೆಚ್ಚದಲ್ಲಿ ಕತ್ರಿನಾ ಕೈಫ್ ಹೇರ್ ಸ್ಟೈಲ್ !

ಫಿತೂರ್ ಸಿನಿಮಾದಲ್ಲಿನ ಹೇರ್ ಸ್ಟೈಲ್ ಗಾಗಿ ಕತ್ರಿನಾ ಕೈಫ್ ಬರೋಬ್ಬರಿ 50 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾಳಂತೆ...
ಕತ್ರಿನಾ ಕೈಫ್
ಕತ್ರಿನಾ ಕೈಫ್

ಮುಂಬೈ: ಫಿತೂರ್ ಸಿನಿಮಾದಲ್ಲಿನ ಹೇರ್ ಸ್ಟೈಲ್ ಗಾಗಿ ಕತ್ರಿನಾ ಕೈಫ್ ಬರೋಬ್ಬರಿ 50 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾಳಂತೆ.

 'ಫಿತೂರ್‌' ಚಿತ್ರಕ್ಕಾಗಿ ಮಾಡಿರುವ ಕೆಂಪು ಬಣ್ಣದ ಕೇಶವಿನ್ಯಾಸಕ್ಕೆ 55 ಲಕ್ಷ ಖರ್ಚಾಗಿದೆ ಎಂದು ಹೇಳಲಾಗಿದೆ. ಅಲ್ಲದೇ ಆಕೆಯ ಕೆಂಪು ಬಣ್ಣದ ಕೂದಲು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಫ್ಯಾಷನ್‌ ಪ್ರಿಯರಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾಗುತ್ತಿದೆ.

ಕತ್ರಿನಾ ತನ್ನ ಕೂದಲಿಗೆ ಬೇಕೆಂದಿದ್ದ ನಿರ್ಧಿಷ್ಟ ಕೆಂಪು ಬಣ್ಣವನ್ನು ನೀಡಲು ಸ್ಥಳೀಯ ಕೇಶ ವಿನ್ಯಾಸಕಾರರಿಗೆ ಸಾಧ್ಯವಾಗದ ಕಾರಣ ಅವರು ಲಂಡನ್‌ನ ಕೇಶ ವಿನ್ಯಾಸಕಾರರ ಬಳಿ ಹೋಗಿ ತಮ್ಮ ಕೂದಲಿಗೆ ಬಣ್ಣ ಹಚ್ಚಿಸಿಕೊಂಡಿದ್ದಾರೆ.

ಈ ಬಣ್ಣ ಸ್ವಲ್ಪ ಜಲ್ ಆದಾಗ ಪುನಃ ಕತ್ರಿನಾ ಕಾಶ್ಮೀರದಿಂದ ದಿಲ್ಲಿಗೆ ಬಂದು ಲಂಡನ್ ಗೆ ಹೋಗುತ್ತಿದ್ದಳು. ಹೀಗೆ ನಾಲ್ಕೈದು ಸಲ ಆಕೆಯೊಂದಿಗೆ ಫ್ಯಾಮಿಲಯೂ ಹೋಗಿದೆ. ಈ ವಿಮಾನದ ಟಿಕೆಟ್ ಖರ್ಚು, ಅಲ್ಲಿ ಉಳಿದುಕೊಳ್ಳಲು ಹೋಟಲ್ ವ್ಯವಸ್ಥೆ, ಉಟೋಪಚಾರ, ಡಿಸೈನಿಂಗ್ ಶುಲ್ಕ ಇವೆಲ್ಲ ಒಟ್ಟು ಸೇರಿ 50 ಲಕ್ಷ ರೂಪಾಯಿ ಆಗಿದೆಯಂತೆ. ಮಜಾ ಅಂದ್ರೆ ಕತ್ರಿನಾ ಲೊರಿಯಲ್  ಪ್ಯಾರಿಸ್ ಬೇರ್ ಕಲರ್ ನ ಜಾಹೀರಾತಿಗೆ ರಾಯಭಾರಿ. ಈ ಕಂಪನಿಯ ಬಣ್ಣ ಹಚ್ಚಿಕೊಂಡಿದ್ದರೆ ಕತ್ರಿನಾಳಿಗೆ 5 ಸಾವಿರ ರೂಪಾಯಿಯೂ ಖರ್ಚು ಆಗುತ್ತಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com