ಬಿಗ್ 'ಬಿ'ಯವರ ಪ್ರತಿಯೊಂದು ಅಭಿನಯ ಪ್ರಶಸ್ತಿಗೆ ಅರ್ಹ: ಐಶ್ವರ್ಯಾ ರೈ

ತಮ್ಮ ಮಾವ ಅಮಿತಾಬ್ ಬಚ್ಚನ್ ರವರ ಪ್ರತಿಯೊಂದು ಸಿನಿಮಾದಲ್ಲಿನ ಅಭಿನಯ ಪ್ರಶಸ್ತಿಗೆ ಅರ್ಹವಾಗಿದೆ ಎಂದು ಬಾಲಿವುಡ್ ನಟಿ...
ಐಶ್ವರ್ಯಾ ರೈ ಬಚ್ಚನ್
ಐಶ್ವರ್ಯಾ ರೈ ಬಚ್ಚನ್
Updated on

ಮುಂಬೈ: ತಮ್ಮ ಮಾವ ಅಮಿತಾಬ್ ಬಚ್ಚನ್ ರವರ ಪ್ರತಿಯೊಂದು ಸಿನಿಮಾದಲ್ಲಿನ ಅಭಿನಯ ಪ್ರಶಸ್ತಿಗೆ ಅರ್ಹವಾಗಿದೆ ಎಂದು ಬಾಲಿವುಡ್ ನಟಿ, ಬಚ್ಚನ್ ಸೊಸೆ ಐಶ್ವರ್ಯಾ ರೈ ಹೊಗಳಿದ್ದಾರೆ.

ಪೀಕು ಚಿತ್ರಕ್ಕಾಗಿ ಅಮಿತಾಬ್ ಬಚ್ಚನ್ ಗೆ ರಾಷ್ಟ್ರಪ್ರಶಸ್ತಿ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅವರಿಗೆ ಪ್ರಶಸ್ತಿ ಸಿಗುತ್ತಿರುವುದು ಇದು ಮೊದಲ ಸಲವಲ್ಲ. ಈ ಬಾರಿ ಮತ್ತೊಮ್ಮೆ ಸಿಕ್ಕಿದೆ. ನಮಗೆ ತುಂಬಾ ಹೆಮ್ಮೆಯಾಗುತ್ತಿದೆ. ಅವರ ಪ್ರತಿ ಸಿನಿಮಾದಲ್ಲಿನ ಅಭಿನಯ ಸಂಭ್ರಮಾಚರಣೆಗೆ ಅರ್ಹವಾಗಿರುತ್ತದೆ. ಅವರ ಪರವಾಗಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳನ್ನು ಹೇಳುತ್ತಾನೆ ಎಂದಿದ್ದಾರೆ.

ಮುಂಬೈಯಲ್ಲಿ ನಿನ್ನೆ ಅವರು ಲೋರಿಯಲ್ ಮಹಿಳಾ ಸಾಧಕಿಯರ 2016ನೇ ಸಾಲಿನ ಪ್ರಶಸ್ತಿ ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಹೀಗೆ ಹೇಳಿದರು.

 ಬಿಳಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಐಶ್ವರ್ಯಾ ಕಾರ್ಯಕ್ರಮದಲ್ಲಿ ನೆರೆದಿದ್ದ ಸಾವಿರಾರು ಜನರ ಮಧ್ಯೆ ಕ್ಯಾಮರಾ ಕಣ್ಣುಗಳಿಗೆ ಸಿಕ್ಕರು. ಅನೇಕ ಅಭಿಮಾನಿಗಳು ಮತ್ತು ಮಾಧ್ಯಮದವರ ಸೆಲ್ಫಿಗೆ ಐಶ್ವರ್ಯಾ ನಗುನಗುತ್ತಲೇ ಫೋಸು ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com