ಬಾಲಿವುಡ್

ಗಂಡು ಮಗುವಿಗೆ ಜನ್ಮ ನೀಡಿದ ಸಲ್ಮಾನ್ ತಂಗಿ ಅರ್ಪಿತಾ

ಗಂಡು ಮಗುವಿಗೆ ಜನ್ಮ ನೀಡಿದ ಸಲ್ಮಾನ್ ತಂಗಿ ಅರ್ಪಿತಾ
ಮಗುವಿನೊಂದಿಗೆ ಆಯೂಷ್ ಕುಟುಂಬವರ್ಗ
Published On :

ಮುಂಬೈ: ಆಯೂಷ್ ಶರ್ಮಾರನ್ನು ವರಿಸಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ತಂಗಿ ಅರ್ಪಿತಾ ಖಾನ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಬುಧವಾರ ಬೆಳಗ್ಗೆ ಮುಂಬೈನ ಸಿಟಿ ಆಸ್ಪತ್ರೆಯಲ್ಲಿ ಅರ್ಪಿತಾ ಖಾನ್ ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ಅಯಿಲ್ ಎಂದು ಹೆಸರಿಡಲಾಗಿದೆ.

ಮಗುವಾದ ಶುಭ ಸುದ್ದಿಯನ್ನು ಆಯೂಷ್ ಶರ್ಮಾ ಇನ್‌ಸ್ಟಾಗ್ರಾಮ್ ನಲ್ಲಿ ಫೋಟೋ ಹಾಕಿ 'ನಮ್ಮ ರಾಜಕುಮಾರ ಬಂದ' ಎಂದು ಬರೆದುಕೊಂಡಿದ್ದಾರೆ.

ಅಯಿಲ್ ಆಗಮನದಿಂದ ಸಲ್ಮಾನ್ ಖಾನ್ ಕುಟುಂಬದಲ್ಲಿ ಸಂತೋಷ ಮನೆ ಮಾಡಿದೆ.

2014ರ ನವೆಂಬರ್ 18ರಂದು ಹೈದರಾಬಾದ್ ನ ಫಲಕ್ನುಮಾ ಪ್ಯಾಲೇಸ್ ನಲ್ಲಿ ಅರ್ಪಿತಾ ಖಾನ್ ಹಾಗೂ ಆಯೂಷ್ ಶರ್ಮಾ ಸಪ್ತಪದಿ ತುಳಿದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.