ನವದೆಹಲಿ: ರಾಮ್‌ಗೋಪಾಲ್ ವರ್ಮಾ ಅವರ ನೂತನ ಹಿಂದಿ ಚಲನಚಿತ್ರ 'ವೀರಪ್ಪನ್'ಗೆ ಸೆನ್ಸಾರ್ ಮಂಡಳಿ ಕತ್ತರಿ ಪ್ರಯೋಗಿಸಿದೆ. ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ವರ್ಮಾ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಿಸಿದ ಸಂಭಾಷಣೆಯೊಂದಕ್ಕೆ ಕತ್ತರಿ ಹಾಕಲು ಸೆನ್ಸಾರ್ ಮಂಡಳಿ ಒತ್ತಾಯಿಸಿದೆ ಎಂದಿದ್ದಾರೆ.