ಕ್ರಿಸ್ ಮಾರ್ಟಿನ್ ಕತ್ರಿನಾ ಕೈಫ್ ಕಪೂರ್ ಎಂದು ಕರೆದಾಗ ಪ್ರಿಯಾಂಕಾ ಚೋಪ್ರಾ ಪ್ರತಿಕ್ರಿಯೆ

ನ್ಯೂಯಾರ್ಕ್ ಸಿಟಿಯ ಸೆಂಟ್ರಲ್ ಪಾರ್ಕ್ ನಲ್ಲಿ ಮೊನ್ನೆ ಶನಿವಾರ ಜಾಗತಿಕ ನಾಗರಿಕ ಉತ್ಸವ...
ಪ್ರಿಯಾಂಕಾ ಚೋಪ್ರಾ-ಕ್ರಿಸ್ ಮಾರ್ಟಿನ್
ಪ್ರಿಯಾಂಕಾ ಚೋಪ್ರಾ-ಕ್ರಿಸ್ ಮಾರ್ಟಿನ್
Updated on: 
ನ್ಯೂಯಾರ್ಕ್ ಸಿಟಿಯ ಸೆಂಟ್ರಲ್ ಪಾರ್ಕ್ ನಲ್ಲಿ ಮೊನ್ನೆ ಶನಿವಾರ ಜಾಗತಿಕ ನಾಗರಿಕ ಉತ್ಸವ(ಗ್ಲೋಬಲ್ ಸಿಟಿಜೆನ್ ಫೆಸ್ಟಿವಲ್) ನಡೆದಿತ್ತು. ಅದರಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೋ-ಹೋಸ್ಟ್ ಆಗಿದ್ದರು. ಭಾರತದ ರಾಯಭಾರಿಯಾಗಿ ಅವರು ಹೋಗಿದ್ದರು.
ಕಾರ್ಯಕ್ರಮವನ್ನು ಹಾಲಿವುಡ್ ನ ಅನೇಕ ಸೆಲೆಬ್ರಿಟಿಗಳು ನಡೆಸಿಕೊಟ್ಟಿದ್ದರು. ಅವರಲ್ಲೊಬ್ಬರು ಇಂಗ್ಲೆಂಡಿನ ರಾಕ್ ಬ್ಯಾಂಡ್ ಸಂಗೀತಗಾರ ಮತ್ತು ಚಿತ್ರ ಕಲಾವಿದ ಕ್ರಿಸ್ ಮಾರ್ಟಿನ್. ಈ ಉತ್ಸವದ ಭಾರತದ ಸರಣಿ ಕಾರ್ಯಕ್ರಮ ನವೆಂಬರ್ 19ರಂದು ಮುಂಬೈಯಲ್ಲಿ ನಡೆಯಲಿದ್ದು, ಅದರಲ್ಲಿ ಯಾರ್ಯಾರು ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ ಎಂತ ಹೆಸರು ಹೇಳುತ್ತಿದ್ದರು. ಆಗ ಪ್ರಮಾದವಶಾತ್ ಕತ್ರಿನಾ ಕೈಫ್ ಅವರ ಹೆಸರನ್ನು ಕತ್ರಿನಾ ಕೈಫ್ ಕಪೂರ್ ಎಂದು ಹೇಳಿಬಿಟ್ಟರು. ಅದಕ್ಕೆ ಸರಿಯಾಗಿ ಈ ಹಿಂದೆ ಕತ್ರಿನಾ ಕೈಫ್ ರಣಬೀರ್ ಕಪೂರ್ ನೊಂದಿಗೆ ಡೇಟಿಂಗ್ ನಲ್ಲಿದ್ದರು.  
ಆಗ ಆ ಸಂದರ್ಭವನ್ನು ಪ್ರಿಯಾಂಕಾ ಚೋಪ್ರಾ ಚೆನ್ನಾಗಿಯೇ ನಿಭಾಯಿಸಿದರು. ಒಂದು ಕ್ಷಣ 'ಓಹ್' ಎಂದ ಪ್ರಿಯಾಂಕಾ ನಂತರ ಭಾರತದ ಆವೃತ್ತಿಯ ಉತ್ಸವ ಹೇಗಿರುತ್ತದೆ, ಅದರ ವಿಶೇಷತೆಯೇನು ಎಂದೆಲ್ಲ ಹೇಳುತ್ತಾ ಹೋದರು. ಭಾರತ ದೇಶದ ಬಗ್ಗೆ ಸುದೀರ್ಘ ವಿವರಣೆಯೊಂದನ್ನು ನೀಡಿದ ಪ್ರಿಯಾಂಕಾ, ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇಕಡಾ 65ರಷ್ಟು ಮಂದಿ 25 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಅವರಲ್ಲಿ ಸಾಕಷ್ಟು ಸಾಮರ್ಥ್ಯವಿದೆ ಎಂದರು. ತಮ್ಮ ಕ್ವಾಂಟಿಕೋ ಕಾರ್ಯಕ್ರಮದ ಬಗ್ಗೆಯೂ ಪ್ರಚಾರ ಮಾಡಿದರು. 
ಗ್ಲೋಬಲ್ ಸಿಟಿಜೆನ್ ಫೆಸ್ಟಿವಲ್ ವಾರ್ಷಿಕ ಸಂಗೀತ ಉತ್ಸವವಾಗಿದ್ದು 2012ರಲ್ಲಿ ಆರಂಭಗೊಂಡಿತು. ಕೋಲ್ಡ್ ಪ್ಲೇಯ ಮುಖ್ಯ ಹಾಡುಗಾರ ಕ್ರಿಸ್ ಮಾರ್ಟಿನ್ ಉತ್ಸವದ ನಿರ್ದೇಶಕ, ಮುಂದಿನ 15 ವರ್ಷಗಳವರೆಗೆ ಅವರೇ ನಿರ್ದೇಶಕರಾಗಿರುತ್ತಾರೆ. ಭಾರತದಲ್ಲಿ ಅವರು ಇದೇ ಮೊದಲ ಸಲ ಕಾರ್ಯಕ್ರಮ ನೀಡಲು ಬರುತ್ತಿದ್ದಾರೆ. ಅವರ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು ಈಗಾಗಲೇ ಜನರು ಟಿಕೆಟ್ ಕಾಯ್ದಿರಿಸುತ್ತಿದ್ದಾರೆ.
2016ರ ಭಾರತದ ಉತ್ಸವ ಮುಂಬೈನಲ್ಲಿ ನವೆಂಬರ್ 19ರಂದು ನಡೆಯಲಿದೆ. ಇದರಲ್ಲಿ ಬಾಲಿವುಡ್ ನ ನಟ,ನಟಿಯರು, ಸಂಗೀತಗಾರರು, ನಿರ್ದೇಶಕರು ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com