ರಾಕೇಶ್, ಹೃತಿಕ್ ರೋಷನ್ ಬಹಿರಂಗವಾಗಿ ನನ್ನಲ್ಲಿ ಕ್ಷಮೆಯಾಚಿಸಬೇಕು: ಕಂಗನಾ ರಣಾವತ್

ಕಳೆದ ಒಂದು ವರ್ಷದಿಂದ ಬಾಲಿವುಡ್ ನಟ ಹೃತಿಕ್ ರೋಷನ್ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಇದೀಗ ನನ್ನ ಹೋರಾಟ...
ಕಂಗನಾ ರಣಾವತ್
ಕಂಗನಾ ರಣಾವತ್
ಮುಂಬೈ: ಕಳೆದ ಒಂದು ವರ್ಷದಿಂದ ಬಾಲಿವುಡ್ ನಟ ಹೃತಿಕ್ ರೋಷನ್ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಇದೀಗ ನನ್ನ ಹೋರಾಟ ಅಂತ್ಯವಾಗಿಲ್ಲ. ಹೃತಿಕ್ ರೋಷನ್ ಮತ್ತು ಅವರ ತಂದೆ ರಾಕೇಶ್ ರೋಷನ್ ನನ್ನಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. 
ಹೃತಿಕ್ ರೋಷನ್ ನಡುವಿನ ಅಫೇರ್ ಜಟಾಪಟಿಯನ್ನು ಕಂಗನಾ ರಣಾವತ್ ಮತ್ತೇ ಕೆದಕಿದ್ದಾರೆ. ಸಿಎನ್ಎನ್-ನ್ಯೂಸ್18 ಚಾನೆಲ್ ನ ನವ್ ಶೋಯಿಂಗ್ ಕಾರ್ಯಕ್ರಮದಲ್ಲಿ ಕಂಗನಾ ರಣಾವತ್ ಈ ವಿವಾದವನ್ನು ತೆರೆದಿಟ್ಟಿದ್ದು, ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಅವರು ನಮ್ಮಿಬ್ಬರ ನಡುವಿನ ಜಟಾಪಟಿಯನ್ನು ಚರ್ಚೆ ಮೂಲಕ ಸರಿಪಡಿಸಲು ಪ್ರಯತ್ನಿಸಿದ್ದರು. ಆದರೆ ಅದು ಇನ್ನೂ ಸಾಧ್ಯವಾಗಿಲ್ಲ ಎಂದರು. 
ಹೃತಿಕ್ ರೋಷನ್ ಜತೆ ನೇರಾ-ನೇರಾ ಮಾತುಕತೆ ಮೂಲಕ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಪಡೆಯಲು ನಾನು ಕಾತುರಳಾಗಿದ್ದೇನೆ. ಆದರೆ ಹೃತಿಕ್ ರೋಷನ್ ನನ್ನಿಂದ ತಪ್ಪಿಸಿಕೊಂಡು ಓಡಾತ್ತಿದ್ದಾರೆ. ಇನ್ನು ನಮ್ಮಬ್ಬಿರನ್ನು ಭೇಟಿ ಮಾಡಿಸುವುದಾಗಿ ಹೇಳಿ ರಾಕೇಶ್ ರೋಷನ್ ನನ್ನನ್ನು ಮೂರ್ಕಳನ್ನಾಗಿಸಿದ್ದಾರೆ. ಹೀಗಾಗಿ ಇವರಿಬ್ಬರು ಸಾರ್ವಜನಿಕವಾಗಿ ನನ್ನಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. 
ಹೃತಿಕ್ ರೋಷನ್ ಹಾಗೂ ಕಂಗನಾ ರಣಾವತ್ ನಡುವೆ ವಿನಿಮಯವಾಗಿದ್ದ ಖಾಸಗಿ ಸಂದೇಶ ಹಾಗೂ ಫೋಟೋಗಳನ್ನು ಮಾಧ್ಯಮದವರಿಗೆ ಬಿಡುಗಡೆ ಮಾಡಿ ನನ್ನ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸುವ ಮೂಲಕ ಕಂಗನಾ ರಣಾವತ್ ಹೃತಿಕ್ ರೋಷನ್ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com