ನಾಳೆ ಸಮಂತಾ-ನಾಗಚೈತನ್ಯರ ಅದ್ಧೂರಿ ನಿಶ್ಚಿತಾರ್ಥ

ಟಾಲಿವುಡ್​ಸೂಪರ್ ಸ್ಟಾರ್ ನಾಗಾರ್ಜುನ ಅವರ ಪುತ್ರ ನಾಗಚೈತನ್ಯ ಹಾಗೂ ಸ್ಟಾರ್ ನಟಿ ಸಮಂತಾ ವಿವಾಹವಾಗುತ್ತಿದ್ದು, ನಾಳೆ ನಿಶ್ಛಿತಾರ್ಥ ಕಾರ್ಯಕ್ರಮ...
ಸಮಂತಾ, ನಾಗಚೈತನ್ಯ
ಸಮಂತಾ, ನಾಗಚೈತನ್ಯ
ಹೈದರಾಬಾದ್: ಟಾಲಿವುಡ್​ಸೂಪರ್ ಸ್ಟಾರ್ ನಾಗಾರ್ಜುನ ಅವರ ಪುತ್ರ ನಾಗಚೈತನ್ಯ ಹಾಗೂ ಸ್ಟಾರ್ ನಟಿ ಸಮಂತಾ ವಿವಾಹವಾಗುತ್ತಿದ್ದು, ನಾಳೆ ನಿಶ್ಛಿತಾರ್ಥ ಕಾರ್ಯಕ್ರಮ ನಡೆಯಲಿದೆ. 
ಎರಡು ಕುಟುಂಬಗಳ ಸಮ್ಮುಖದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದ್ದು ಅಕ್ಕಿನೇನಿ ಕುಟುಂಬಕ್ಕೆ ಹತ್ತಿರವಾಗಿರುವ ಚಿರಂಜಿವಿ ಮತ್ತು ಮಹೇಶ್ ಬಾಬು ಅವರು ಭಾಗಿಯಾಗಲಿದ್ದಾರೆ. 
ಮೂಲಗಳ ಪ್ರಕಾರ, ನಾಗಚೈತನ್ಯಗೆ ಸಮಂತಾ ಅವರು ವಿಶೇಷ ಬೈಕ್ ವೊಂದನ್ನು ಗಿಫ್ಟ್ ನೀಡಲಿದ್ದಾರೆ. ಎಂವಿ ಅಗಸ್ಟಾ ಕಂಪನಿಯ ಬೈಕ್ ಬೆಲೆ 27 ಲಕ್ಷ ರುಪಾಯಿ. 
ನಾಗಚೈತನ್ಯರ ಕಿರಿಯ ಸಹೋದರ ಅಖಿಲ್ ಅಕ್ಕಿನೇನಿ ಕೂಡ ಮದುವೆಗೆ ಸಿದ್ಧರಾಗಿದ್ದು ಈ ವಿವಾಹ ನಡೆದ ಬಳಿಕ ಸಮಂತಾ-ನಾಗಚೈತನ್ಯ ವಿವಾಹ ನಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com