ದೀಪಿಕಾ ಪಡುಕೋಣೆ ನಟನೆಯ 'ಪದ್ಮಾವತಿ' ಟ್ರೈಲರ್ 13:03 ಕ್ಕೆ ಬಿಡುಗಡೆಯಾಗಿದ್ದು ಯಾಕೆ?

ಸಂಜಯ್ ಲೀಲಾ ಬನ್ಸಾಲಿಯ ಪದ್ಮಾವತಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ರಜಪೂತರ ಶೌರ್ಯದ ಬಗ್ಗೆ ಚಿತ್ರದಲ್ಲಿ ಹೇಳಲಾಗಿದೆ.
ಪದ್ಮಾವತಿ
ಪದ್ಮಾವತಿ
ಮುಂಬೈ: ಸಂಜಯ್ ಲೀಲಾ ಬನ್ಸಾಲಿಯ ಪದ್ಮಾವತಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ರಜಪೂತರ ಶೌರ್ಯದ ಬಗ್ಗೆ ಚಿತ್ರದಲ್ಲಿ ಹೇಳಲಾಗಿದೆ. 
ಪದ್ಮಾವತಿ ಚಿತ್ರದ ಟ್ರೈಲರ್ 13:03 ಗಂಟೆಗೆ ಬಿಡುಗಡೆಯಾಗಿದ್ದು, 1303 ನೇ ಇಸವಿಯಲ್ಲಿ ರಜಪೂತರು ತಮ್ಮ ಗೌರವಕ್ಕಾಗಿ ಹೋರಾಟ ನಡೆಸಿದ ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ರಜಪೂತರಿಗೆ ಸಂಬಂಧಿಸಿದ ಪದ್ಮಾವತಿ ಚಿತ್ರದ ಟ್ರೈಲರ್ ನ್ನು 13:00 ಗಂಟೆಗೇ ಬಿಡುಗಡೆ ಮಾಡಲಾಗಿದೆ. 
ಪದ್ಮಾವತಿ ಚಿತ್ರದಲ್ಲಿ ರಜಪೂತರಿಗೆ ಸಂಬಂಧಿಸಿದ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದ ಶ್ರೀ ರಾಷ್ಟ್ರೀಯ ರಜಪೂತ್ ಕರ್ಣಿ ಸೇನಾ ಸಂಜಯ್ ಲೀಲಾ ಬನ್ಸಾಲಿ ಮೇಲೆ ದಾಳಿ ನಡೆಸಿತ್ತು. ಇಂದು ಪದ್ಮಾವತಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಡಿ.1 ರಂದು ಚಿತ್ರ ಬಿಡುಗಡೆಯಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com