ಗೃಹಿಣಿಯರು ದೇಶದ ಅತಿದೊಡ್ಡ ಸಿಇಒಗಳು; ಐಶ್ವರ್ಯಾ ರೈ ಬಚ್ಚನ್

ಗೃಹಿಣಿಯರು ದೇಶದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು(ಸಿಇಒ). ಹೀಗೆಂದು ಹೇಳಿದ್ದು ಮಾಜಿ ...
ಐಶ್ವರ್ಯಾ ರೈ ಬಚ್ಚನ್
ಐಶ್ವರ್ಯಾ ರೈ ಬಚ್ಚನ್

ಮುಂಬೈ: ಗೃಹಿಣಿಯರು ದೇಶದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು(ಸಿಇಒ). ಹೀಗೆಂದು ಹೇಳಿದ್ದು ಮಾಜಿ ವಿಶ್ವಸುಂದರಿ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್.

ಇಂಡಿಯನ್ ಐಡೊಲ್ 10 ನ ಈ ವಾರದ ಎಪಿಸೋಡ್ ನಲ್ಲಿ ಭಾಗಿಯಾಗಿದ್ದ ಐಶ್ವರ್ಯಾ ರೈ ಅನಿಲ್ ಕಪೂರ್ ಮತ್ತು ರಾಜ್ ಕುಮಾರ್ ರಾವ್ ಅವರ ಜೊತೆ ಫನ್ನಿ ಖಾನ್ ಚಿತ್ರದ ಪ್ರೊಮೋಶನ್ ಗಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸ್ಪರ್ಧಿ ಇಂದಿರಾ ದಾಸ್ ಪ್ರದರ್ಶನದ ನಂತರ ಆಕೆಯ ತಾಯಿ ಐಶ್ವರ್ಯಾರಲ್ಲಿ ಗೃಹಿಣಿಯರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದರು.

ಅದಕ್ಕೆ ಐಶ್ವರ್ಯಾ, ಗೃಹಿಣಿಯರು ದೇಶದ ದೊಡ್ಡ ಸಿಇಒಗಳು. ಅವರಿಗೆ ಅತೀವ ಗೌರವ ಪ್ರೀತಿ, ಪ್ರೋತ್ಸಾಹ ತೋರಿಸಬೇಕು. ನನ್ನ ತಲೆಯಲ್ಲಿನ ಟೊಪ್ಪಿ ಕೆಳಗಿಳಿಸಿ ದೇಶದ ಮತ್ತು ಪ್ರಪಂಚದ ಎಲ್ಲಾ ಗೃಹಿಣಿಯರಿಗೆ ನಾನು ಸಂಪೂರ್ಣ ಗೌರವವನ್ನು ಮತ್ತು ಮೆಚ್ಚುಗೆಯನ್ನು ನೀಡುತ್ತೇನೆ ಎಂದು ಹೇಳಿದರು.

ಅದಕ್ಕೆ ಶೋದ ತೀರ್ಪುಗಾರರಲ್ಲಿ ಒಬ್ಬರಾದ ವಿಶಾಲ್ ದದ್ಲಾನಿ ಪ್ರತಿಕ್ರಿಯಿಸಿ, ''ವಿಶ್ವದ ಅತ್ಯಂತ ಸುಂದರ ಮಹಿಳೆಯಾದ ಐಶ್ವರ್ಯಾ ರೈ ವೃತ್ತಿಯಲ್ಲಿ ಇಷ್ಟು ಹೆಸರು ಮಾಡಿದ್ದರೂ ಕೂಡ ಬೇರೆ ಗೃಹಿಣಿಯಂತೆ ವರ್ತಿಸುತ್ತಾರೆ. ನಾನು ಒಂದು ಬಾರಿ ಮ್ಯೂಸಿಕ್ ವರ್ಲ್ಡ್ ಟೂರ್ ಗೆ ಹೋಗಿದ್ದ ಸಂದರ್ಭದಲ್ಲಿ ಅಮಿತಾಬ್ ಬಚ್ಚನ್ ಅವರು ನನ್ನನ್ನು ಮತ್ತು ಇಡೀ ತಂಡವನ್ನು ರಾತ್ರಿ ಡಿನ್ನರ್ ಗೆ ಕರೆದಿದ್ದರು. ಅಂದು ಐಶ್ವರ್ಯಾ ಅವರೇ ಖುದ್ದಾಗಿ ಎಲ್ಲರಿಗೂ ಊಟ ಬಡಿಸಿದರು. ತಂಡದ ಎಲ್ಲರಿಗೂ ಚೆನ್ನಾಗಿ ಊಟ ಬಡಿಸಿದ ನಂತರ ತಾವು ಊಟ ಮಾಡಿದರು'' ಎಂದು ಹೊಗಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com