ಮಾಜಿ ಮ್ಯಾನೇಜರ್ ವಿರುದ್ಧ ಕೇಸು ದಾಖಲಿಸಿದ ಬಾಲಿವುಡ್ ನಟಿ ಜರೀನ್ ಖಾನ್

ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟಂತೆ ತಮಗೆ ಬೆದರಿಕೆ ಹಾಕಿರುವುದು ಮಾತ್ರವಲ್ಲದೆ ಅನುಚಿತವಾಗಿ ...
ಬಾಲಿವುಡ್ ನಟಿ ಜರೀನ್ ಖಾನ್
ಬಾಲಿವುಡ್ ನಟಿ ಜರೀನ್ ಖಾನ್

ಮುಂಬೈ: ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟಂತೆ ತಮಗೆ ಬೆದರಿಕೆ ಹಾಕಿರುವುದು ಮಾತ್ರವಲ್ಲದೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ ಬಾಲಿವುಡ್ ನಟಿ ಜರೀನ್ ಖಾನ್ ತನ್ನ ಮಾಜಿ ಮ್ಯಾನೇಜರ್ ಅಂಜಲಿ ವಿರುದ್ಧ ಕೇಸು ದಾಖಲಿಸಿದ್ದಾರೆ.

ನಿನ್ನೆ ತಮ್ಮ ವಕೀಲರ ಜೊತೆ ಆಗಮಿಸಿದ ಜರೀನ್ ಖಾನ್ ಮುಂಬೈಯ ಖಾರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ 509ರಡಿಯಲ್ಲಿ ಕೇಸು ದಾಖಲಾಗಿದೆ.

ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟಂತೆ ಜರೀನ್ ಖಾನ್ ರ ಮಾಜಿ ಮ್ಯಾನೇಜರ್ ಅಂಜಲಿ ನಟಿಯ ಜೊತೆ ಅನುಚಿತವಾಗಿ ವರ್ತಿಸಿ ನಿಂದಿಸಿದ್ದಾರೆ. ಅಲ್ಲದೆ ಜರೀನ್ ರ ಮೊಬೈಲ್ ಗೆ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಮುಂಬೈ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com