'ದೇಶದ ಎಲ್ಲಾ ಯುವಕರು ಮದುವೆಯಾಗಬೇಕು': ನವ ವಿವಾಹಿತ ರಣವೀರ್ ಸಿಂಗ್

ಬಾಲಿವುಡ್ ನಟ ರಣವೀರ್ ಸಿಂಗ್ ಅವರು ತಮ್ಮ ಕನಸಿನ ರಾಣಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರೊಂದಿಗೆ....
ರಣವೀರ್ ಸಿಂಗ್, ದೀಪಿಕಾ ಪಡುಕೋಣೆ
ರಣವೀರ್ ಸಿಂಗ್, ದೀಪಿಕಾ ಪಡುಕೋಣೆ
Updated on: 
ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಅವರು ತಮ್ಮ ಕನಸಿನ ರಾಣಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರೊಂದಿಗೆ ಸಪ್ತಪದಿ ತುಳಿದ ನಂತರ ಈಗ 'ದೇಶದ ಎಲ್ಲಾ ಯುವಕರು ಮದುವೆಯಾಗಬೇಕು' ಎಂದು ಕರೆ ನೀಡಿದ್ದಾರೆ.
'ಮದುವೆ ಒಂದು ಅತ್ಯುತ್ತಮ ವಿಚಾರ. ಆ ಅದ್ಭುತ ನನ್ನ ಜೀವನದಲ್ಲಿ ಘಟಿಸಿದೆ. ಹೀಗಾಗಿ ನಾನು ಹಾರಾಡುತ್ತಿದ್ದೇನೆ, ನನಗೆ ಮ್ಯಾಜಿಕ್ ರೀತಿಯ ಅನುಭವವಾಗುತ್ತಿದೆ. ಒಂದು ರೀತಿಯ ಶಕ್ತಿ ಬಂದಂತಾಗಿದೆ. ನಾನು ಈಗ ದೊಡ್ಡವನಾಗಿದ್ದೇನೆ ಮತ್ತು ಪೂರ್ಣ ಮನುಷ್ಯನಾಗಿದ್ದೇನೆ' ಎಂದು ರಣವೀರ್ ಹೇಳಿಕೊಂಡಿದ್ದಾರೆ.
ನಾನು ಮದುವೆಯಾಗಿ ಕೇವಲ 10-15 ದಿನ ಆಗಿದೆ ಅಷ್ಟೆ. ನನ್ನಿಂದ ಪ್ರೇರಣೆ ಪಡೆದು ದೇಶದ ಎಲ್ಲಾ ಯುವಕರು ಮದುವೆಯಾಗಬೇಕು ಎಂದು ನಾನು ಶಿಫಾರಸು ಮಾಡುತ್ತೇನೆ ಎಂದಿದ್ದಾರೆ.
ದೀಪಿಕಾ ನನಗಿಂತಲೂ ಪ್ರವೀಣೆಯಾಗಿದ್ದು, ಆಕೆಯ ಸಾಧನೆಯನ್ನು ನಾನು ಗೌರವಿಸುತ್ತೇನೆ ಮತ್ತು ಶ್ಲಾಘಿಸುತ್ತೇನೆ. ನನ್ನ ಮನೆಯಲ್ಲಿ ನನ್ನನ್ನು ನವಾಬ್ ನಂತೆ ಬೆಳಸಿದರು. ಆದರೆ ದೀಪಿಕಾ ಸ್ವತಂತ್ರವಾಗಿ ಬೆಳೆದಿದ್ದಾಳೆ. ಅವಳ ಜಗತ್ತಿಗೆ ಅವಳೇ ಸಿಇಒ. ಅವಳು ಯಶಸ್ಸಿನ ತುತ್ತತುದಿಯಲ್ಲಿದ್ದಾಳೆ. ಅವಳು ಎಲ್ಲದರಲ್ಲೂ ಉತ್ತಮ ಎಂದು ರಣವೀರ್ ಸಿಂಗ್ ತನ್ನ ಪತ್ನಿಯನ್ನು ಹಾಡಿ ಹೊಗಳಿದ್ದಾರೆ.
'ದಾಂಪತ್ಯದ ಜೀವನ ಯಶಸ್ವಿಯಾಗಬೇಕಾದರೆ ಎಲ್ಲದಕ್ಕೂ ಯೆಸ್ ಅನ್ನಬೇಕು' ಎಂಬುದನ್ನು ನಾನು ಬಹಳ ಬೇಗ ಕಲಿತೆ ಎಂದು ರಣವೀರ್ ಹೇಳಿದ್ದಾರೆ.
33 ವರ್ಷದ ರಣವೀರ್ ಸಿಂಗ್ ಅವರು 32 ವರ್ಷದ ದೀಪಿಕಾಳೊಂದಿಗೆ ಆರು ವರ್ಷಗಳ ಕಾಲ ಪ್ರೀತಿ ಮಾಡಿ, ಕಳೆದ ನವೆಂಬರ್ ನಲ್ಲಿ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com