ನಾಸಿರುದ್ದೀನ್ ಜೊತೆ ನೇರವಾಗಿ ಮಾತನಾಡುತ್ತೇನೆ, ಮೀಡಿಯಾ ಮೂಲಕ ಮಾತಾಡಲ್ಲ: ಅನುಪಮ್ ಖೇರ್

ಭಾರತದಲ್ಲಿ ನನ್ನ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿದಾಗ ಭಯವಾಗುತ್ತದೆ ಎಂಬ ಬಾಲಿವುಡ್ ನಟ ನಾಸಿರುದ್ದೀನ್ ಶಾ ಅವರ ಹೇಳಿಕೆಗಳ ಬಗ್ಗೆ ಬಾಲಿವುಡ್ ನ ನಟರು ನೀಡುತ್ತಿರುವ ಪ್ರತಿಕ್ರಿಯೆ ಮುಂದುವರೆದಿದ್ದು
ನಾಸಿರುದ್ದೀನ್ ಶಾ-ಅನುಪಮ್ ಖೇರ್
ನಾಸಿರುದ್ದೀನ್ ಶಾ-ಅನುಪಮ್ ಖೇರ್
Updated on: 
ಮುಂಬೈ: ಭಾರತದಲ್ಲಿ ನನ್ನ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿದಾಗ ಭಯವಾಗುತ್ತದೆ ಎಂಬ ಬಾಲಿವುಡ್ ನಟ ನಾಸಿರುದ್ದೀನ್ ಶಾ ಅವರ ಹೇಳಿಕೆಗಳ ಬಗ್ಗೆ ಬಾಲಿವುಡ್ ನ ನಟರು ನೀಡುತ್ತಿರುವ ಪ್ರತಿಕ್ರಿಯೆ ಮುಂದುವರೆದಿದ್ದು, ಈ ಬಗ್ಗೆ ಅನುಪಮ್ ಖೇರ್ ಸಹ ಪ್ರತಿಕ್ರಿಯಿಸಿದ್ದಾರೆ. 
ನಾಸಿರುದ್ದೀನ್ ಶಾ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನುಪಮ್ ಖೇರ್, "ನಾಸಿರುದ್ದೀನ್ ಶಾ ಗೆ ಏನೇ ಹೇಳುವುದಿದ್ದರೂ ದೂರವಾಣಿ ಕರೆ ಮಾಡಿ ನೇರವಾಗಿ ಮಾತನಾಡುತ್ತೇನೆ, ಮಾಧ್ಯಮಗಳ ಮೂಲಕ ಮಾತನಾಡುವುದಿಲ್ಲ" ಎಂದಿದ್ದಾರೆ. 
ನವದೆಹಲಿಯಲ್ಲಿನ ರಾಷ್ಟ್ರೀಯ ನಟನಾ ಶಾಲೆಯಲ್ಲಿ ಬಾಲ್ಯದಿಂದಲೂ ಅನುಪಮ್ ಖೇರ್ ಹಾಗೂ ನಾಸಿರುದ್ದೀನ್ ಶಾ ಸ್ನೇಹಿತರು. ಹೀಗಿದ್ದರೂ ಅನೇಕ ಬಾರಿ ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ನಾಸಿರುದ್ದೀನ್ ಶಾ ಬುಲಂದ್ ಶಹರ್ ನಲ್ಲಿ ಹಸುವಿನ ಕಾರಣಕ್ಕಾಗಿ ನಡೆದಿದೆ ಎನ್ನಲಾದ ಪೊಲೀಸ್ ಅಧಿಕಾರಿಯ ಹತ್ಯೆ ಬಗ್ಗೆ ಮಾತನಾಡಿ, ಭಾರತದಲ್ಲಿ ನನ್ನ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿದಾಗಲೆಲ್ಲಾ ಭಯವಾಗುತ್ತದೆ ಎಂದಿದ್ದರು. ನಾಸಿರುದ್ದೀನ್ ಶಾ ಅವರ ಈ ಹೇಳಿಕೆ ತೀವ್ರ ಚರ್ಚೆಗೆ ಗುರಿಯಾಗಿತ್ತು. 
ನಾಸಿರುದ್ದೀನ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯೆ ಕೇಳಿದಾಗ ಮಾತನಾಡಿರುವ ಅನುಪಮ್ ಖೇರ್, ಈ ದೇಶದಲ್ಲಿ ಸೇನೆಯ ಮೇಲೂ ವಾಗ್ದಾಳಿ ನಡೆಸುವ ಮಟ್ಟಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಇನ್ನೆಷ್ಟು ಸ್ವಾತಂತ್ರ್ಯ ಬೇಕು ಎದ್ಂಉ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಬಗ್ಗೆ ನಾಸಿರುದ್ದೀನ್ ಶಾ ಅವರೊಂದಿಗೆ ಮಾತನಾಡುವುದು ಏನಾದರೂ ಇದ್ದರೆ ನೇರವಾಗಿಯೇ ಮಾತನಾಡುತ್ತೇನೆ ಮಾಧ್ಯಮಗಳ ಮೂಲಕ ಮಾತನಾಡುವುದಿಲ್ಲ ಎಂದೂ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com