ಯಶರಾಜ್ ಫಿಲ್ಮ್ಸ್ ಮುಂದಿನ ಚಿತ್ರದಲ್ಲಿ ಹೃತಿಕ್ ರೋಷನ್, ಟೈಗರ್ ಶ್ರಾಫ್, ವಾಣಿ ಕಪೂರ್

ಯಶರಾಜ್ ಫಿಲ್ಮ್ಸ್(ವೈಆರ್ ಎಫ್) ನಿರ್ಮಿಸುತ್ತಿರುವ ಹೆಸರಿಡದ ಮೇಗಾ ಆ್ಯಕ್ಷನ್ ಚಿತ್ರದಲ್ಲಿ ಬಾಲಿವುಡ್ ಖ್ಯಾತ ...
ಹೃತಿಕ್ ರೋಷನ್, ವಾಣಿ ಕಪೂರ್, ಟೈಗರ್ ಶ್ರಾಫ್,
ಹೃತಿಕ್ ರೋಷನ್, ವಾಣಿ ಕಪೂರ್, ಟೈಗರ್ ಶ್ರಾಫ್,
ನವದೆಹಲಿ: ಯಶರಾಜ್ ಫಿಲ್ಮ್ಸ್(ವೈಆರ್ ಎಫ್) ನಿರ್ಮಿಸುತ್ತಿರುವ ಹೆಸರಿಡದ ಮೇಗಾ ಆ್ಯಕ್ಷನ್ ಚಿತ್ರದಲ್ಲಿ ಬಾಲಿವುಡ್ ಖ್ಯಾತ ನಟ ಹೃತಿಕ್ ರೋಷನ್, ಟೈಗರ್ ಶ್ರಾಫ್ ಹಾಗೂ ವಾಣಿ ಕಪೂರ್ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಈ ಚಿತ್ರವನ್ನು ಜಗತ್ತಿನ ಆರು ದೇಶಗಳ 14 ಪ್ರಮುಖ ನಗರಗಳಲ್ಲಿ ಚಿತ್ರೀಕರಿಸಲಾಗುತ್ತಿದ್ದು, ಹಾಲಿವುಡ್ ನ ಅತಿದೊಡ್ಡ ಆ್ಯಕ್ಷನ್ ಚಿತ್ರಗಳಿಗೆ ಪೈಪೋಟಿ ನೀಡಲಿದೆ ಎಂದು ಚಿತ್ರದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರು ಹೇಳಿದ್ದಾರೆ.
ಹೃತಿಕ್ ಮತ್ತು ಟೈಗರ್ ಶ್ರಾಫ್ ಅವರು ಇದೇ ಮೊದಲ ಬಾರಿಗೆ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಸೆಪ್ಟೆಂಬರ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಬಾಲಿವುಡ್ ತಯಾರಿಸಲಾಗುತ್ತಿರುವ ಆ್ಯಕ್ಷನ್ ಚಿತ್ರಗಳಿಂದ ನಮ್ಮ ಚಿತ್ರ ಭಿನ್ನವಾಗಿರಲಿದೆ. ಆ್ಯಕ್ಷನ್ ದೃಶ್ಯಗಳನ್ನು ಸ್ಪೇನ್, ಜಾರ್ಜಿಯಾ, ಇಟಲಿ, ಪೋರ್ಚುಗಲ್ ಮತ್ತು ಸ್ವೀಡನ್ ಹಾಗೂ ಭಾರತದಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ ಎಂದು ಆನಂದ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com