ರಣವೀರ್-ದೀಪಿಕಾ ಮದುವೆ ನವೆಂಬರ್ 19ಕ್ಕೆ?

ಬಾಲಿವುಡ್ ಖ್ಯಾತ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇದೇ ವರ್ಷ ...
ರಣವೀರ್ ಸಿಂಗ್-ದೀಪಿಕಾ ಪಡುಕೋಣೆ
ರಣವೀರ್ ಸಿಂಗ್-ದೀಪಿಕಾ ಪಡುಕೋಣೆ
Updated on: 

ನವದೆಹಲಿ: ಬಾಲಿವುಡ್ ಖ್ಯಾತ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇದೇ ವರ್ಷ ನವೆಂಬರ್ 19ರಂದು ಮದುವೆಯಾಗಲಿದ್ದಾರೆ ಎಂದು ಫಿಲ್ಮ್ ಫೇರ್ ಸಿನಿ ಪತ್ರಿಕೆ ವರದಿ ಮಾಡಿದೆ.

ಆದರೆ ಈ ಬಗ್ಗೆ ಇನ್ನೂ ರಣವೀರ್ ಆಗಲಿ ದೀಪಿಕಾ ಆಗಲಿ ದೃಢಪಡಿಸಿಲ್ಲ. ಈ ಹಿಂದೆ ತಮ್ಮ ಮದುವೆ ಬಗ್ಗೆ ಕೇಳಿಬಂದ ಸುದ್ದಿಯನ್ನು ನಿರಾಕರಿಸಿದ್ದ ರಣವೀರ್ ಸಿಂಗ್, ಅಂತಹ ಬೆಳವಣಿಗೆಯೇನು ಆಗಿಲ್ಲ, ಮದುವೆ ನಡೆಯುವುದಿದ್ದರೆ ನಾನೇ ಮೊದಲು ಎಲ್ಲರಿಗೂ ತಿಳಿಸುತ್ತೇನೆ ಎಂದಿದ್ದರು.

ಸಾರ್ವಜನಿಕವಾಗಿ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದ ದೀಪ್ ವೀರ್ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಈ ಕ್ಯೂಟ್ ಜೋಡಿ ತಮ್ಮ ಸಂಬಂಧದ ಬಗ್ಗೆ ಇದುವರೆಗೆ ಒಪ್ಪಿಕೊಂಡಿಲ್ಲ.

ಬಾಲಿವುಡ್ ನಲ್ಲಿ ಇತ್ತೀಚೆಗೆ ಮದುವೆ ಸಂಭ್ರಮ ಜೋರಾಗಿದೆ.ಕಳೆದ ಡಿಸೆಂಬರ್ ನಲ್ಲಿ ಅನುಷ್ಕಾ ಶರ್ಮ ಮತ್ತು ವಿರಾಟ್ ಕೊಹ್ಲಿ, ನಂತರ ಈ ತಿಂಗಳು ಸೋನಂ ಕಪೂರ್-ಆನಂದ್ ಅಹುಜಾ ನಂತರ ನೇಹಾ ದುಪಿಯಾ ಮತ್ತು ಅಂಗದ್ ಬೇಡಿ ವಿವಾಹವಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com