ಅಕ್ಕ ಜಾಹ್ನವಿ ಕಪೂರ್‌ರನ್ನು ಮೀರಿಸುವಂತಿದೆ ತಂಗಿಯ ಹಾಟ್ ಲುಕ್!

ದಢಕ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಭಾರತೀಯ ಚಿತ್ರರಂಗದ ಧ್ರುವತಾರೆ ದಿವಂಗತ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್ ತುಂಡು ಬಟ್ಟೆ ಹಾಗೂ ಹಾಟ್ ಪೋಸ್...
ಖುಷಿ ಕಪೂರ್
ಖುಷಿ ಕಪೂರ್
Updated on
ದಢಕ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಭಾರತೀಯ ಚಿತ್ರರಂಗದ ಧ್ರುವತಾರೆ ದಿವಂಗತ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್ ತುಂಡು ಬಟ್ಟೆ ಹಾಗೂ ಹಾಟ್ ಪೋಸ್ ಗಳಿಂದ ಬೋಲ್ಡ್ ಆಗಿ ಕಾಣಿಸಿಕೊಂಡು ಟ್ರೋಲ್ ಗೆ ಗುರಿಯಾಗಿದ್ದರು. ಇದೀಗ ಈ ಸರದಿ ಸಹೋದರಿ ಖುಷಿ ಕಪೂರ್ ಅವರದ್ದು ಹಾಟ್ ಉಡುಗೆ ತೊಟ್ಟು ಟ್ರೋಲ್ ಗೆ ಗುರಿಯಾಗಿದ್ದಾರೆ. 
ಮುಖೇಶ್ ಅಂಬಾನಿ ಮಗಳು ಇಷಾ ಅಂಬಾನಿಯ ನಿಶ್ಚಿತಾರ್ಥಕ್ಕೆ ಆಗಮಿಸಿದ್ದ ಖುಷಿ ಕಪೂರ್, ವಿನ್ಯಾಸಭರಿತ ಬಟ್ಟೆ ತೊಡುವ ಮೂಲಕ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು ಕೆಲವರ ಕಣ್ಣು ಕೆಂಪಾಗಿಸಿದೆ. 
ಈ ಹಿಂದೆ ಜಾಹ್ನವಿ ಕಪೂರ್ ಸ್ಟೈಲಿಶ್ ಲುಕ್ ಗಾಗಿ ಟೀ ಶರ್ಟ್ ಹಾಗೂ ಶಾರ್ಟ್ಸ್ ಧರಿಸಿ ಹೊರಗಡೆ ಕಾಣಿಸಿಕೊಂಡಿದ್ದು ತಮ್ಮ ಡ್ರೆಸ್ ಸ್ಟೈಲ್ ನಿಂದಾಗಿ ಟ್ರೋಲ್ ಗೆ ಗುರಿಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com