ದೆಹಲಿ: ಮೇಡಮ್ ಟುಸಾಡ್ಸ್ ಮ್ಯೂಸಿಯಂನಲ್ಲಿ ಸನ್ನಿ ಲಿಯೋನ್ ಮೇಣದ ಪ್ರತಿಮೆ ಅನಾವರಣ!

ಬಾಲಿವುಡ್ ಹಾಟ್ ಬೆಡಗಿ, ಮಾಜಿ ನೀಲಿ ಸುಂದರಿ ಸನ್ನಿ ಲಿಯೋನ್ ಮೇಣದ ಪ್ರತಿಮೆ ದೆಹಲಿಯ ಮೇಡಮ್ ಟುಸಾಡ್ಸ್ ಮ್ಯೂಸಿಯಂನಲ್ಲಿ ಅನಾವರಣಗೊಂಡಿದೆ.
ಸನ್ನಿ ಲಿಯೋನ್ ಮೇಣದ ಪ್ರತಿಮೆ
ಸನ್ನಿ ಲಿಯೋನ್ ಮೇಣದ ಪ್ರತಿಮೆ

ದೆಹಲಿ: ಬಾಲಿವುಡ್ ಹಾಟ್ ಬೆಡಗಿ, ಮಾಜಿ ನೀಲಿ ಸುಂದರಿ ಸನ್ನಿ ಲಿಯೋನ್ ಮೇಣದ ಪ್ರತಿಮೆ  ದೆಹಲಿಯ ಮೇಡಮ್ ಟುಸಾಡ್ಸ್  ಮ್ಯೂಸಿಯಂನಲ್ಲಿ ಅನಾವರಣಗೊಂಡಿದೆ.

ಮೇಡಮ್ ಟುಸಾಡ್ಸ್ ಮ್ಯೂಸಿಯಂನಲ್ಲಿ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಶಾರೂಕ್ ಖಾನ್ ವರೆಗೂ ಕೆಲ ಬಾಲಿವುಡ್ ತಾರೆಯರ ಪ್ರತಿಮೆಗಳನ್ನು ಕಾಣಬಹುದಾಗಿದೆ. ಈಗ ಈ ಸಾಲಿನಲ್ಲಿ ಸನ್ನಿ ಲಿಯೋನ್ ಸ್ಥಾನ ಪಡೆದುಕೊಂಡಿದ್ದಾರೆ.

ದೇಶದಲ್ಲಿ ಇದು ಮೊದಲ ಪರಿಮಳಯುಕ್ತ ಮೇಣದ ಪ್ರತಿಮೆಯಾಗಿದ್ದು, ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸನ್ನಿ ಲಿಯೋನ್  ಪಾಲ್ಗೊಂಡಿದ್ದರು.

ಮ್ಯೂಸಿಯಂನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ  ನರೇಂದ್ರ ಮೋದಿ, ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್, ಶಾರೂಕ್ ಖಾನ್,  ಕರೀನಾ ಕಪೂರ್, ಸಲ್ಮಾನ್ ಖಾನ್ ಅವರಂತಹ ವ್ಯಕ್ತಿಗಳ ಮೇಣದ ಪ್ರತಿಮೆಗಳ ಸಾಲಿನಲ್ಲಿ ಸನ್ನಿ ಲಿಯೋನ್ ಪ್ರತಿಮೆಯನ್ನು ಲಂಡನ್ ಮೂಲಕದ ಮ್ಯೂಸಿಯಂ ಅನಾವರಣಗೊಳಿಸಿದೆ.

ತಮ್ಮ ಮೇಣದ ಪ್ರತಿಮೆ ಅನಾವರಣದಿಂದ ತುಂಬಾ ಸಂತೋಷವಾಗಿರುತ್ತಿರುವುದಾಗಿ ಸನ್ನಿ ಲಿಯೋನ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ. ಲಂಡನ್ ನಿಂದ ಆಗಮಿಸಿದ್ದ ಪರಿಣಿತರ ತಂಡ ಸನ್ನಿ ಲಿಯೋನ್ ಅವರಿಂದ 200 ಪೋಟೋಗಳನ್ನು ಸಂಗ್ರಹಿಸಿ ಈ ಮೇಣದ ಪ್ರತಿಮೆಯನ್ನು ರಚಿಸಿದೆ.

ಸನ್ನಿ ಲಿಯೋನ್ ಈಗ ತಮಿಳಿನ ಚೊಚ್ಚಲ  ವೀರಾಮಹಾದೇವಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ  ಪಡ್ಡೆಹುಡುಗರ ನೆಚ್ಚಿನ ನಟಿಯಾಗಿರುವ ಸನ್ನಿ ಲಿಯೋನ್ 2011ರಲ್ಲಿ ಬಿಗ್ ಬಾಗ್  ಸ್ಪರ್ಧೆಯಲ್ಲಿ ಪಾಲ್ಗೊಂಡು ಹೆಚ್ಚು ಖ್ಯಾತಿ ಗಳಿಸಿದ್ದರು. ನಂತರ 2012ರಲ್ಲಿ ಜಿಸ್ಮಿ -2 ಚಿತ್ರದಲ್ಲಿ  ನಟಿಸಿ ತನ್ನ ಮೈಮಾಟದಿಂದ ಯುವಕರನ್ನು ಆಕರ್ಷಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com