ಗಂಡು ಮಗುವಿಗೆ ತಾಯಿಯಾದ ನಿರ್ಮಾಪಕಿ ಎಕ್ತಾ ಕಪೂರ್!

ತಮ್ಮ ಕಿರಿಯ ಸಹೋದರ ತುಷಾರ್ ಕಪೂರ್ ಅವರ ಹಾದಿಯಲ್ಲೇ ನಡೆದ ನಿರ್ಮಾಪಕಿ ಎಕ್ತಾ ಕಪೂರ್ ಬಾಡಿಗೆ ತಾಯಿಯ ಮೂಲಕ ಗಂಡುಮಗುವಿಗೆ ಜನ್ಮ ನೀಡಿದ್ದಾರೆ....
ಎಕ್ತಾ ಕಪೂರ್
ಎಕ್ತಾ ಕಪೂರ್
ನವದೆಹಲಿ: ತಮ್ಮ ಕಿರಿಯ ಸಹೋದರ ತುಷಾರ್ ಕಪೂರ್ ಅವರ ಹಾದಿಯಲ್ಲೇ ನಡೆದ ನಿರ್ಮಾಪಕಿ ಎಕ್ತಾ ಕಪೂರ್ ಬಾಡಿಗೆ ತಾಯಿಯ ಮೂಲಕ ಗಂಡುಮಗುವಿಗೆ ಜನ್ಮ ನೀಡಿದ್ದಾರೆ.
43 ವರ್ಷದ ಎಕ್ತಾ ಕಪೂರ್ ಪ್ರಸಿದ್ದ ನಿರ್ಮಾಪಕಿಯಾಗಿ ಹಲವು ಪ್ರಖ್ಯಾತ ಧಾರಾವಾಹಿಗಳನ್ನು ನೀಡಿದ್ದಾರೆ. ಆದರೆ  ಎಕ್ತಾ ಕಪೂರ್ ಇದುವರೆಗೂ ಈ ವಿಷಯವನ್ನು ಹಂಚಿಕೊಂಡಿಲ್ಲ,
ಜನವರಿ 27 ರಂದು ಮಗು ಜನಿಸಿದ್ದು, ಶೀಘ್ರವೇ ಮನೆಗೆ ಕರೆತರುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ, 
ಜಿತೇಂದರ್ ಮತ್ತು ಶೋಭಾ ಕಪೂರ್  ಮಕ್ಕಳಾದ ತುಷಾ ಕಪೂರ್ ಮತ್ತು ಎಕ್ತಾ ಕಪೂರ್ ಇಬ್ಬರು ಅವಿವಾಹಿತರಾಗಿದ್ದಾರೆ, ಇಬ್ಬರು ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com