ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ: ಶಾನೂ ಶರ್ಮಾ ವಿಚಾರಣೆ ನಡೆಸಿದ ಪೊಲೀಸರು

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಸ್ತ್ರ ವಿನ್ಯಾಸಕ ನಿರ್ದೇಶಕಿ ಶಾನೂ ಶರ್ಮಾ ಅವರನ್ನು ಮುಂಬೈ ಪೊಲೀಸರು ಶನಿವಾರ ವಿಚಾರಣೆ ನಡೆಸಿದ್ದಾರೆ.
ಸುಶಾಂತ್ ಸಿಂಗ್, ಶಾನೂ ಶರ್ಮಾ
ಸುಶಾಂತ್ ಸಿಂಗ್, ಶಾನೂ ಶರ್ಮಾ
Updated on

ಮುಂಬೈ:  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಸ್ತ್ರ ವಿನ್ಯಾಸಕ ನಿರ್ದೇಶಕಿ ಶಾನೂ ಶರ್ಮಾ ಅವರನ್ನು ಮುಂಬೈ ಪೊಲೀಸರು ಶನಿವಾರ ವಿಚಾರಣೆ ನಡೆಸಿದ್ದಾರೆ.

ಯಶ್ ರಾಜ್ ಫಿಲಂಸ್ ವಸ್ತ್ರ ವಿನ್ಯಾಸಕಿ ನಿರ್ದೇಶಕಿಯಾಗಿರುವ ಶಾನೂ ಶರ್ಮಾ ಅವರನ್ನು ಬಾಂದ್ರಾ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ.ಸುಶಾಂತ್ ಸಿಂಗ್ ನೇಣು ಹಾಕಿಕೊಂಡು ಉಸಿರುಕಟ್ಟಿ ಸಾವನ್ನಪ್ಪಿರುವುದಾಗಿ ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ.

ಅಂತಿಮ ವರದಿಯಲ್ಲಿ ಸಾವಿಗೂ ಮುಂಚಿತವಾಗಿ ಯಾವುದೇ ಹೋರಾಟದ ಲಕ್ಷಣಗಳು ಕಂಡುಬಂದಿಲ್ಲ, ಉಗುರುಗಳಲ್ಲಿಯೂ ಏನೂ ಆಗಿಲ್ಲ ಎಂದು ಐವರು ವೈದ್ಯರನ್ನೊಳಗೊಂಡ ತಂಡ ವರದಿಯನ್ನು ವಿಶ್ಲೇಷಿಸಿದೆ. ಪೊಲೀಸರು ಈಗ ಒಳಾಂಗಗಳ ವರದಿಗಾಗಿ ಕಾಯುತ್ತಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು 23 ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com