'ಚಲ್ತೆ ಚಲ್ತೆ' ಖ್ಯಾತಿಯ ಬಾಲಿವುಡ್ ನಟ ವಿಶಾಲ್ ಆನಂದ್ ವಿಧಿವಶ

ಹಿಂದಿ ಚಿತ್ರರಂಗದ ಹಿರಿಯ ಹಾಗೂ ಖ್ಯಾತ ನಟ ವಿಶಾಲ್ ಆನಂದ್ (81) ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಅಕ್ಟೋಬರ್ 4 ರಂದು ಸಾವನ್ನಪ್ಪಿದ್ದಾರೆ.
ವಿಶಾಲ್ ಆನಂದ್
ವಿಶಾಲ್ ಆನಂದ್
Updated on

ಮುಂಬಯಿ: ಹಿಂದಿ ಚಿತ್ರರಂಗದ ಹಿರಿಯ ಹಾಗೂ ಖ್ಯಾತ ನಟ ವಿಶಾಲ್ ಆನಂದ್ (81) ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಅಕ್ಟೋಬರ್ 4 ರಂದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

1976ರಲ್ಲಿ ತೆರೆಕಂಡಿದ್ದ 'ಚಲ್ತೆ ಚಲ್ತೆ' ಚಿತ್ರದ ಮೂಲಕ ಬಹಳ ದೊಡ್ಡ ಖ್ಯಾತಿ ಗಳಿಸಿಕೊಂಡಿದ್ದರು. ಈ ಚಿತ್ರದಲ್ಲಿ ಸಿಮಿ ಅಗರ್‌ವಾಲ್ ಎದುರು ನಟಿಸಿದ್ದರು. ವೃತ್ತಿ ಜೀವನದಲ್ಲಿ ಸುಮಾರು 11 ಚಿತ್ರಗಳಲ್ಲಿ ವಿಶಾಲ್ ಆನಂದ್ ಬಣ್ಣ ಹಚ್ಚಿದ್ದರು. ಕೆಲವು ಚಿತ್ರಗಳನ್ನು ನಿರ್ದೇಶನ ಸಹ ಮಾಡಿದ್ದು, ಇನ್ನು ಕೆಲವು ಚಿತ್ರಗಳಿಗೆ ನಿರ್ಮಾಪಕರಾಗಿದ್ದರು

ಹಮರಾ ಅಧಿಕಾರ್, ಸಾ-ರೆ-ಗ-ಮ-ಪ, ಟ್ಯಾಕ್ಸಿ ಡ್ರೈವರ್, ಇಂತೆಜಾರ್, ಹಿಂದೂಸ್ತಾನ್ ಕಿ ಕಸಮ್, ಚಲ್ತೆ ಚಲ್ತೆ, ದಿಲ್ ಸೆ ಮೈಲ್ ದಿಲ್, ಕಿಸ್ಮೆತ್ ಮತ್ತು ಮೈನೆ ಜೀನಾ ಸಿಖ್ ಲಿಯಾ ಅಂತಹ ಚಿತ್ರಗಳಲ್ಲಿ ವಿಶಾಲ್ ಕಾಣಿಸಿಕೊಂಡಿದ್ದರು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com