ಕ್ಯಾನ್ಸರ್ ಪೀಡಿತ ತಾಯಿಯ ಚಿಕಿತ್ಸೆಗೆ ನೆರವು ನೀಡಿದ ಸಲ್ಮಾನ್ ಖಾನ್ ಗೆ ಧನ್ಯವಾದ: ರಾಖಿ ಸಾವಂತ್ 

ಕ್ಯಾನ್ಸರ್ ಪೀಡಿತ ತಾಯಿ ಜಯ ಅವರ ಚಿಕಿತ್ಸೆಗಾಗಿ ನೆರವು ನೀಡಿದ್ದಕ್ಕಾಗಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಅವರ ಸಹೋದರ  ಸೊಹೈಲ್ ಖಾನ್ ಅವರಿಗೆ ಬಾಲಿವುಡ್ ನಟಿ ರಾಖಿ ಸಾವಂತ್ ಧನ್ಯವಾದ ಸಲ್ಲಿಸಿದ್ದಾರೆ.
ರಾಖಿ ಸಾವಂತ್, ಆಸ್ಪತ್ರೆಯಲ್ಲಿರುವ ಆಕೆಯ ತಾಯಿ
ರಾಖಿ ಸಾವಂತ್, ಆಸ್ಪತ್ರೆಯಲ್ಲಿರುವ ಆಕೆಯ ತಾಯಿ
Updated on

ಮುಂಬೈ: ಕ್ಯಾನ್ಸರ್ ಪೀಡಿತ ತಾಯಿ ಜಯ ಅವರ ಚಿಕಿತ್ಸೆಗಾಗಿ ನೆರವು ನೀಡಿದ್ದಕ್ಕಾಗಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಅವರ ಸಹೋದರ  ಸೊಹೈಲ್ ಖಾನ್ ಅವರಿಗೆ ಬಾಲಿವುಡ್ ನಟಿ ರಾಖಿ ಸಾವಂತ್ ಧನ್ಯವಾದ ಸಲ್ಲಿಸಿದ್ದಾರೆ.

ತನ್ನ ತಾಯಿ ಆಸ್ಪತ್ರೆಯಲ್ಲಿರುವ  ವಿಡಿಯೋ ಕ್ಲಿಪ್ ನ್ನು ಇನ್ಸಾಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ರಾಖಿ ಸಾವಂತ್, ಇಂದು ನನ್ನ ತಾಯಿಗೆ ಕ್ಯಾನ್ಸರ್ ಗಾಗಿ ಶಸ್ತ್ರ ಚಿಕಿತ್ಸೆ ನಡೆಯಲಿದೆ. ನಾನು ತುಂಬಾ ಸಂತೋಷವಾಗಿದ್ದೇನೆ. ಇನ್ನು ಮುಂದೆ ನೀವು ಯಾವುದೇ ಟೆನ್ಷನ್ ತೆಗೆದುಕೊಳ್ಳಬೇಡಿ. ಕ್ಯಾನ್ಸರ್ ನಿಮ್ಮ ದೇಹದಿಂದ ಶಾಶ್ವತವಾಗಿ ಹೋಗಲಿದೆ ಎಂದಿದ್ದಾರೆ.

ನಂತರ ರಾಖಿ ಸಾವಂತ್ ತಾಯಿ ಜಯ ಮಾತನಾಡಿ, ಚಿಕಿತ್ಸೆಗಾಗಿ ನೆರವು ನೀಡಿದ್ದಕ್ಕೆ ಸಲ್ಮಾನ್ ಖಾನ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಸಲ್ಮಾನ್ ಖಾನ್ ಗೆ ನಮಸ್ಕಾರ ಹೇಳಲು ಇಷ್ಟಪಡುತ್ತೇನೆ. ನನ್ನ ಬಳಿ ಹಣವಿಲ್ಲ ಎಂದು ಯೇಸುವಿಗೆ ಪ್ರಾರ್ಥಿಸುತ್ತಿದ್ದೆ. ಇಂತಹ ಸ್ಥಿತಿಯಲ್ಲಿ ಸಲ್ಮಾನ್ ಅವರನ್ನು ದೇವದೂತರಾಗಿ ದೇವರೆ ಕಳುಹಿಸಿದ್ದಾರೆ. ಆಪರೇಷನ್ ಗಾಗಿ ಅವರು ನೆರವು ನೀಡಿದ್ದು, ಅವರಿಗೆ ಹಾಗೂ ಅವರ ಕುಟುಂಬಕ್ಕೆ ಧನ್ಯವಾದ ಸಲ್ಲಿಸುವುದಾಗಿ ಜಯ ಹೇಳಿದ್ದಾರೆ.

ರಾಖಿ ಸಾವಂತ್ ಕೂಡಾ ಸಲ್ಮಾನ್ ಖಾನ್ ಗೆ ಧನ್ಯವಾದ ಸಲ್ಲಿಸಿದ್ದಾರೆ. ಸಲ್ಮಾನ್ ಖಾನ್ ಮತ್ತು ಸೊಹೈಲ್ ಖಾನ್ ನಂತಹ ಮಕ್ಕಳನ್ನು ದೇಶದ ಪ್ರತಿಯೊಂದು ಮನೆಯೂ ಪಡೆಯಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com