ದೆಹಲಿಯಲ್ಲಿ 1983 ವಿಶ್ವಕಪ್ ಆಧಾರಿತ ರಣ್ ವೀರ್ ಸಿಂಗ್ ಅಭಿನಯದ ’83’ ಸಿನಿಮಾ ತೆರಿಗೆ ಮುಕ್ತ

ರಿಲಯನ್ಸ್ ಎಂಟರ್ಟೇನ್ಮೆಂಟ್ ಗ್ರೂಪ್ ಸಿಇಒ ಶಿಬಾಶಿಶ್ ಸರ್ಕಾರ್ ಟ್ವಿಟರ್‍ನಲ್ಲಿ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿರ್ಧಾರಕ್ಕೆ ಧನ್ಯವಾದ ತಿಳಿಸಿದ್ದಾರೆ. 
ಸಿನಿಮಾ ಪೋಸ್ಟರ್
ಸಿನಿಮಾ ಪೋಸ್ಟರ್

ಮುಂಬೈ: ನಿರ್ದೇಶಕ ಕಬೀರ್ ಖಾನ್, ನಟ ರಣವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ’83’ ಅನ್ನು ದೆಹಲಿಯಲ್ಲಿ ತೆರಿಗೆ ಮುಕ್ತಗೊಳಿಸಲಾಗಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ.

ರಿಲಯನ್ಸ್ ಎಂಟರ್ಟೇನ್ಮೆಂಟ್ ಗ್ರೂಪ್ ಸಿಇಒ ಶಿಬಾಶಿಶ್ ಸರ್ಕಾರ್ ಟ್ವಿಟರ್‍ನಲ್ಲಿ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿರ್ಧಾರಕ್ಕೆ ಧನ್ಯವಾದ ತಿಳಿಸಿದ್ದಾರೆ. 

1983 ರಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತವು ಕಪಿಲ್ ದೇವ್ ನೇತೃತ್ವದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಅದೇ ಘಟನೆಯನ್ನಾಧರಿಸಿ '83' ಸಿನಿಮಾ ತಯಾರಿಸಲಾಗಿದೆ. 

ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ’83’ ಸಿನಿಮಾ, ಡಿಸೆಂಬರ್ 24 ರಂದು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com