ಕತ್ರಿನಾ ಕೈಫ್ ಗೆ 3 ಕೋಟಿ ಬೆಲೆಬಾಳುವ ಕಾರು ಗಿಫ್ಟ್ ಕೊಟ್ಟ ಮಾಜಿ ಬಾಯ್ ಫ್ರೆಂಡ್ ಸಲ್ಮಾನ್ ಖಾನ್!

 ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ , ವಿಕ್ಕಿ ಕೌಶಲ್ ಗೆ ಸೆಲಿಬ್ರಿಟಿ ಫ್ರೆಂಡ್ಸ್  ಗಳಿಂದ ದುಬಾರಿ ಗಿಫ್ಟ್ ಸಿಗುತ್ತಿದೆ.  
ಸಲ್ಮಾನ್ ಖಾನ್, ಕತ್ರಿನಾ ಕೈಫ್
ಸಲ್ಮಾನ್ ಖಾನ್, ಕತ್ರಿನಾ ಕೈಫ್

ಮುಂಬೈ: ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ , ವಿಕ್ಕಿ ಕೌಶಲ್ ಗೆ ಸೆಲಿಬ್ರಿಟಿ ಫ್ರೆಂಡ್ಸ್  ಗಳಿಂದ ದುಬಾರಿ ಗಿಫ್ಟ್ ಸಿಗುತ್ತಿದೆ.  

ವಿಕ್ಕಿ ಕೌಶಲ್ ಜೊತೆಗೆ ಕಳೆದ ವಾರ ಮದುವೆಯಾದ ಕತ್ರಿನಾ ಕೈಫ್, ಮಾಜಿ ಬಾಯ್ ಫ್ರೆಂಡ್ ಸಲ್ಮಾನ್ ಖಾನ್ ಅವರಿಂದ ಸುಮಾರು 3 ಕೋಟಿ ರೂ. ಬೆಲೆ ಬಾಳುವ ರೇಂಜ್ ರೋವರ್ ಕಾರನ್ನು ಗಿಫ್ಟ್ ಆಗಿ ಪಡೆದಿರುವುದಾಗಿ ವರದಿಯಾಗಿದೆ. ಮತ್ತೊಂದೆಡೆ ರಣಬೀರ್ ಕಫೂರ್ ಅವರಿಂದ ಸುಮಾರು 2.7 ಕೋಟಿ ಬೆಲೆಬಾಳುವ ಡೈಮಂಡ್ ನೆಕ್ಲೆಸ್ ಗಿಫ್ಟ್ ಪಡೆದಿರುವುದಾಗಿ ಬಾಲಿವುಡ್ ಲೈಫ್ ಹೇಳಿದೆ. 

ಕತ್ರಿನಾ ಅವರ ಬ್ಯಾಂಗ್ ಬ್ಯಾಂಗ್ ಸಹನಟ ಹೃತಿಕ್ ರೋಷನ್  3 ಲಕ್ಷ ಮೌಲ್ಯದ ಬಿಎಂಡಬ್ಲ್ಯೂ ಜಿ 310 ಆರ್ ಬೈಕ್ ನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ 6.4 ಲಕ್ಷ ರೂ. ಮೌಲ್ಯದ ಡೈಮಂಡ್ ಕಿವಿಯೊಲೆ ನೀಡಿದ್ದಾರೆ ಎನ್ನಲಾಗಿದೆ. 

ಕತ್ರಿನಾ ಮತ್ತು ವಿಕ್ಕಿ ಕೌಶಲ್ ಡಿಸೆಂಬರ್ 9 ರಂದು ರಾಜಸ್ಥಾನದಲ್ಲಿ ವಿವಾಹವಾಗಿದ್ದರು. ಅವರ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ಮಾತ್ರ ವಿವಾಹದಲ್ಲಿ ಭಾಗಿಯಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com