ಬಾಲಿವುಡ್ ತಾರೆ ದಿಯಾ ಮಿರ್ಜಾಗೆ ಗಂಡು ಮಗು ಜನನ

ಬಾಲಿವುಡ್ ತಾರೆ ದಿಯಾ ಮಿರ್ಜಾ ತನ್ನ ಮಗುವಿನ ಮೊದಲ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ "ತನ್ನ ಮಗ ಅವ್ಯಾನ್ ಆಜಾದ್ ರೇಖಿ ಮೇ 14 ರಂದು ಅವಧಿಪೂರ್ವವಾಗಿ ಜನಿಸಿದ ಮತ್ತು ಆಸ್ಪತ್ರೆಯಲ್ಲಿ ವೈದ್ಯರು ಮತ್ತು ದಾದಿಯರ ಪ್ರೀತಿಯ ಆರೈಕೆಯಲ್ಲಿದ್ದ" ಎಂದು ಬರೆದಿದ್ದಾರೆ.
ದಿಯಾ ಮಿರ್ಜಾ
ದಿಯಾ ಮಿರ್ಜಾ
Updated on

ಬಾಲಿವುಡ್ ತಾರೆ ದಿಯಾ ಮಿರ್ಜಾ ತನ್ನ ಮಗುವಿನ ಮೊದಲ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ "ತನ್ನ ಮಗ ಅವ್ಯಾನ್ ಆಜಾದ್ ರೇಖಿ ಮೇ 14 ರಂದು ಅವಧಿಪೂರ್ವವಾಗಿ ಜನಿಸಿದ ಮತ್ತು ಆಸ್ಪತ್ರೆಯಲ್ಲಿ ವೈದ್ಯರು ಮತ್ತು ದಾದಿಯರ ಪ್ರೀತಿಯ ಆರೈಕೆಯಲ್ಲಿದ್ದ" ಎಂದು ಬರೆದಿದ್ದಾರೆ.

ದಿಯಾಗೆ  ತುರ್ತು ಅಪೆಂಡೆಕ್ಟಮಿ ಮತ್ತು ತೀವ್ರವಾದ ಬ್ಯಾಕ್ಟೀರಿಯಾದ ಸೋಂಕು ಇದ್ದು ಅದು ಮಗುವಿಗೆ ಹಾನಿಯಾಗಬಹುದು ಮತ್ತು ಸಿ-ಸೆಕ್ಷನ್ ನಂತರ, ಮಗುವನ್ನು ನವಜಾತ ಶಿಶುಗಳ ಐಸಿಯುನಲ್ಲಿ ಇರಿಸಿ ಆರೈಕೆ ಮಾಡಲಾಗಿತ್ತು.

ಮಗು ತನ್ನ ಹೆತ್ತವರು, ಅಜ್ಜಿಯರು ಮತ್ತು ಸಹೋದರಿ ಸಮೈರಾ ಇರುವ ಮನೆಗೆ ಶೀಘ್ರವೇ ಬರುತ್ತಾನೆ ಎಂದು ದಿಯಾ ಹೇಳಿದ್ದಾರೆ.

ದಿಯಾ ಕೊನೆಯ ಬಾರಿಗೆ ಅನುಭವ್ ಸಿನ್ಹಾ ಅವರ "ಥಪ್ಪಡ್" ನಲ್ಲಿ ಕಾಣಿಸಿಕೊಂಡಿದ್ದಾರೆ. ತಾಪ್ಸಿ ಪನ್ನು ಅಭಿನಯದ ಕಳೆದ ವರ್ಷ ಬಿಡುಗಡೆಯಾಗಿದ್ದ ಈ ಸಿನಿಮಾ ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ನಾಗಾರ್ಜುನ ಮತ್ತು ಸೈಯಾಮಿ ಖೇರ್ ಜೊತೆಯಾಗಿ ನಟಿಸಿರುವ ತೆಲುಗು ಆಕ್ಷನ್ ಡ್ರಾಮಾ "ವೈಲ್ಡ್ ಡಾಗ್" ನಲ್ಲಿ ದಿಯಾ ಅಭಿನಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com