ಕೆಲವರ ಅಧೀನದಲ್ಲಿದ್ದ ಬಾಲಿವುಡ್ 'ಏಕಸ್ವಾಮ್ಯ'ವನ್ನು ಒಟಿಟಿ ಮುರಿದು ಹಾಕಿ, ಹೊಸ ನಟರಿಗೆ ಅವಕಾಶ ಕಲ್ಪಿಸಿದೆ: ಪ್ರಿಯಾಂಕಾ ಚೋಪ್ರಾ

ಕೆಲವು ವ್ಯಕ್ತಿಗಳ ಅಧೀನದಲ್ಲಿದ್ದ ಬಾಲಿವುಡ್ 'ಏಕಸ್ವಾಮ್ಯ'ವನ್ನು ಒಟಿಟಿ ಮುರಿದು ಹಾಕಿದ್ದು, ಹೊಸ ನಟರಿಗೆ ಅವಕಾಶ ಕಲ್ಪಿಸುತ್ತಿದೆ ಎಂದು ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ

ಮುಂಬೈ: ಕೆಲವು ವ್ಯಕ್ತಿಗಳ ಅಧೀನದಲ್ಲಿದ್ದ ಬಾಲಿವುಡ್ 'ಏಕಸ್ವಾಮ್ಯ'ವನ್ನು ಒಟಿಟಿ ಮುರಿದು ಹಾಕಿದ್ದು, ಹೊಸ ನಟರಿಗೆ ಅವಕಾಶ ಕಲ್ಪಿಸುತ್ತಿದೆ ಎಂದು ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.

ಇತ್ತೀಚೆಗಷ್ಟೇ ತಮ್ಮ ನೂತನ ಚಿತ್ರ ವೈಟ್ ಟೈಗರ್ ಮೂಲಕ ಮೊದಲ ಬಾರಿಗೆ ಒಟಿಟಿ ರಂಗಕ್ಕೆ ಪ್ರವೇಶ ಮಾಡಿರುವ ಪ್ರಿಯಾಂಕಾ ಚೋಪ್ರಾ, ಮಂಗಳವಾರ ಸಂಜೆ ಅಮೆರಿಕದಲ್ಲಿ ನಡೆದ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಝೀ 5 ಪ್ರಾರಂಭೋತ್ಸವದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು.  

'ವೈವಿಧ್ಯಮಯ ಕಥೆಗಳನ್ನು ಮತ್ತು ಚಿತ್ರಗಳನ್ನು ವೀಕ್ಷಿಸಲು ವೀಕ್ಷಕರಿಗೆ ಅವಕಾಶ ನೀಡಿದ್ದಲ್ಲದೆ, ಚಿತ್ರರಂಗವನ್ನು ಪ್ರಜಾಪ್ರಭುತ್ವಗೊಳಿಸಿದ್ದರಿಂದ ಜನರು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಅಳವಡಿಸಿಕೊಳ್ಳಬೇಕು. ಸ್ಟ್ರೀಮಿಂಗ್ ಸೇವೆಗಳು ನಟರನ್ನು ಹಿಂದಿ ಚಿತ್ರದ 'ಸೂತ್ರ'ದ ಹೊರಗೆ ಯೋಚಿಸುವಂತೆ ಮಾಡಿದೆ.  ಭಾರತೀಯ ಚಿತ್ರರಂಗದಲ್ಲಿ ನೀವು ನೋಡುತ್ತಿರುವುದು ಅದನ್ನೇ.. ಸ್ಟ್ರೀಮಿಂಗ್ ಸೇವೆಗಳ ಸ್ವಾತಂತ್ರ್ಯವು ಜನರಿಗೆ ಮೊದಲು ಇದ್ದ ಸೂತ್ರಕ್ಕಿಂತ ದೊಡ್ಡ ಆಲೋಚನೆಗಳನ್ನು ಹೊಂದಲು ಅನುವು ಮಾಡಿಕೊಡುತ್ತದೆ. ಅದು ಐದು ಹಾಡುಗಳು, ಒಂದು ಹೋರಾಟದ ಅನುಕ್ರಮವಾಗಿರಬೇಕು. ಆ ಸಂಪರ್ಕ ಈಗ  ಕಡಿತವಾಗಿದೆ. ಈಗ ಜನರು ಉತ್ತಮವಾದ, ನೈಜ ಕಥೆಗಳನ್ನು ನೋಡಲು ಬಯಸುತ್ತಾರೆ. ಇದರಿಂದ ಅವರು ತಮ್ಮ ಛಾಪು ಮೂಡಿಸುತ್ತಾರೆ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.

ನಿರ್ದಿಷ್ಟ ಸಂಖ್ಯೆಯ ಜನರ ಏಕಸ್ವಾಮ್ಯ ಮುರಿದಿದೆ
ಇದೇ ವೇಳೆ ಬಾಲಿವುಡ್ ನ ಕೆಲವರ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿರುವ ಪ್ರಿಯಾಂಕಾ ಚೋಪ್ರಾ, ಒಟಿಟಿ ಅಥವಾ ಡಿಜಿಟಲ್ ಪ್ಲಾಟ್ ಫಾರ್ಮ್ ಗಳು, ಭಾರತದಲ್ಲಿ, "ನಿರ್ದಿಷ್ಟ ಸಂಖ್ಯೆಯ ಜನರ" ಏಕಸ್ವಾಮ್ಯವನ್ನು ಮುರಿದುಬಿಟ್ಟಿದೆ, ಇದರ ಪರಿಣಾಮವಾಗಿ ಹೊಸ ಕಥೆಗಳು ಹುಟ್ಟಿಕೊಳ್ಳಲಾರಂಭಿಸಿದೆ.  ಇದು ನಿಜಕ್ಕೂ ಅದ್ಭುತವಾದದ್ದು.. ಹೊಸ ಬರಹಗಾರರು, ನಟರು, ಚಲನಚಿತ್ರ ನಿರ್ಮಾಪಕರಿಗೆ ಒಂದು ನಿರ್ದಿಷ್ಟ ಉದ್ಯಮದಿಂದ ದೀರ್ಘಕಾಲದವರೆಗೆ ಏಕಸ್ವಾಮ್ಯವನ್ನು ಹೊಂದಿದ್ದ ಉದ್ಯಮಕ್ಕೆ ಬರಲು ಅವಕಾಶವನ್ನು ನೀಡುತ್ತದೆ. ಅಭಿವೃದ್ಧಿ, ಮನರಂಜನೆ ಮತ್ತು ವಿಶೇಷವಾಗಿ ಭಾರತೀಯ ಚಿತ್ರರಂಗಕ್ಕೆ ಇದು  ಉತ್ತಮ ಸಮಯವಾಗಿದೆ ಎಂದು ಅಭಿಪ್ರಾಪಟ್ಟರು.

ಜಗತ್ತಿನಾದ್ಯಂತದ ಪ್ರೇಕ್ಷಕರಿಗೆ ಸ್ಟ್ರೀಮಿಂಗ್ ಒದಗಿಸಿರುವ ಸ್ವಾತಂತ್ರ್ಯವೆಂದರೆ ನಿಮ್ಮ ಮನೆಗಳ ಸೌಕರ್ಯದಿಂದ ನೀವು ಚಲನಚಿತ್ರಗಳನ್ನು ವೀಕ್ಷಿಸಬಹುದು. ಇದು ಹೊಸ ಸಂಸ್ಕೃತಿಯನ್ನು ಹರಡುತ್ತಿದೆ ಮತ್ತು ಜನರಿಗೆ ಶಿಕ್ಷಣ ನೀಡುತ್ತಿದೆ. ಅವರಿಗೆ ಶಿಕ್ಷಣ ನೀಡುತ್ತಿದೆ, ಎಲ್ಲ ರೀತಿಯ ಭಾರತೀಯ ಸಿನೆಮಾಗಳೊಂದಿಗೆ  ಪರಿಚಯವಾಗುತ್ತಿರುವ ದೊಡ್ಡ, ಹೊಸ ಪ್ರೇಕ್ಷಕರು ಇದ್ದಾರೆ. ಪ್ರಸ್ತುತ ಭಾರತೀಯ ಚಲನಚಿತ್ರೋದ್ಯಮವು "ರೋಮಾಂಚಕಾರಿ ಸಮಯ" ದ ಮೂಲಕ ಸಾಗುತ್ತಿದೆ ಎಂದು ಹೇಳಿದರು.

"ಇದು ಭವಿಷ್ಯವಲ್ಲ, ಅದು ವರ್ತಮಾನ..ಹಾಲಿವುಡ್‌ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ನಟ-ನಿರ್ಮಾಪಕರಾಗಿ, ಜಾಗತಿಕ ವೇದಿಕೆಯಲ್ಲಿ ದಕ್ಷಿಣ ಏಷ್ಯಾದ ಕಲಾವಿದರಿಗೆ ಹೆಚ್ಚಿನ ಜಾಗವನ್ನು ಸೃಷ್ಟಿಸಲು ತಮ್ಮ ಶಕ್ತಿಯನ್ನು ಬಳಸಿಕೊಳ್ಳಲು ಬಯಸುತ್ತಾರೆ. ಇದಕ್ಕೆ ಡಿಜಿಟಲ್ ಪ್ಲಾಟ್ ಫಾರ್ಮ್ ಅವಕಾಶ ಕಲ್ಪಿಸುತ್ತದೆ.  ವಿಶ್ವದ ಎರಡು ದೊಡ್ಡ ಮನರಂಜನಾ ಉದ್ಯಮಗಳಲ್ಲಿ ಮನರಂಜನಾ ವ್ಯವಹಾರದಲ್ಲಿರಲು ಸಾಧ್ಯವಾಗುವ ಭಾಗ್ಯವನ್ನು ಪಡೆದ ಕೆಲವೇ ಜನರಲ್ಲಿ ನಾನೂ ಒಬ್ಬಳು. ನನ್ನ ಅನ್ವೇಷಣೆಯು ಹೆಚ್ಚಿನ ಮಾನ್ಯತೆ, ಪ್ರಾತಿನಿಧ್ಯ ಮತ್ತು ದಕ್ಷಿಣ ಏಷ್ಯಾದ ಜನರನ್ನು ಅಂತಾರಾಷ್ಟ್ರೀಯ ಸಮುದಾಯದಲ್ಲಿ, ವಿಶೇಷವಾಗಿ ದಕ್ಷಿಣ  ಏಷ್ಯಾದ ಹೊರಗೆ ನೋಡುವ ಮತ್ತು ಕೇಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com