ಅನುಮತಿ ಇಲ್ಲದೆ ಅಮಿತಾಬ್ ಬಚ್ಚನ್ ಧ್ವನಿ, ಚಿತ್ರ ಬಳಸುವಂತಿಲ್ಲ: ದೆಹಲಿ ಹೈಕೋರ್ಟ್

ನಟ ಅಮಿತಾಭ್ ಬಚ್ಚನ್ ರ ಅನುಮತಿ ಇಲ್ಲದೇ ಅವರ ಧ್ವನಿ ಹಾಗೂ ಚಿತ್ರಗಳನ್ನು ಎಲ್ಲಿಯೂ ಬಳಕೆ ಮಾಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಮಿತಾಬ್ ಬಚ್ಚನ್(ಸಂಗ್ರಹ ಚಿತ್ರ)
ಅಮಿತಾಬ್ ಬಚ್ಚನ್(ಸಂಗ್ರಹ ಚಿತ್ರ)

ನವದೆಹಲಿ: ನಟ ಅಮಿತಾಭ್ ಬಚ್ಚನ್ ರ ಅನುಮತಿ ಇಲ್ಲದೇ ಅವರ ಧ್ವನಿ ಹಾಗೂ ಚಿತ್ರಗಳನ್ನು ಎಲ್ಲಿಯೂ ಬಳಕೆ ಮಾಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ನಟ ಅಮಿತಾಭ್ ಬಚ್ಚನ್ ಅವರ ಧ್ವನಿ, ಚಿತ್ರ ಅಥವಾ ಯಾವುದೇ ವ್ಯಕ್ತಿಯಿಂದ ಪ್ರತ್ಯೇಕವಾಗಿ ಗುರುತಿಸಬಹುದಾದ ಇತರ ಯಾವುದೇ ಗುಣಲಕ್ಷಣಗಳನ್ನು ಅನಧಿಕೃತವಾಗಿ ಬಳಸುವುದನ್ನು ತಡೆಯುವ ಮಧ್ಯಂತರ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ನೀಡಿದೆ.

ಹಲವು ಸಂಸ್ಥೆಗಳು‌‌‌ / ವ್ಯಕ್ತಿಗಳು ತಮ್ಮ ಅನುಮತಿ ಇಲ್ಲದೆ ಫೋಟೋ, ಹೆಸರು ಹಾಗೂ ಧ್ವನಿಯನ್ನು ಬಳಸುತ್ತಿದ್ದು, ಅವುಗಳಿಗೆ ನಿರ್ಬಂಧ ಹೇರಬೇಕು ಎಂದು ಕೋರಿ ಅಮಿತಾಭ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 

ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌, ಅಮಿತಾಭ್‌ ಅವರ ಚಿತ್ರ, ಧ್ವನಿ, ಹೆಸರು ಹಾಗೂ ವ್ಯಕ್ತಿತ್ವ ಗುಣಲಕ್ಷಣಗಳನ್ನು ಅನುಮತಿ ಇಲ್ಲದೇ ಬಳಸಕೂಡದು ಎಂದು ಆದೇಶಿಸಿದೆ. ಅಲ್ಲದೇ ಅನುಮತಿ ಇಲ್ಲದೆ ಬಳಸಿದವುಗಳನ್ನು ತೆಗೆದುಹಾಕಿ ಎಂದು ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಸೂಚನೆ ನೀಡಿದೆ. ‘ಕೆಲವು ತಮ್ಮ ಉತ್ಪನ್ನ ಹಾಗೂ ಸೇವೆಗಳನ್ನು ಪ್ರಚಾರ ಮಾಡುವ ಸಲುವಾಗಿ ಅರ್ಜಿದಾರರ ಸೆಲೆಬ್ರೆಟಿ ಸ್ಥಾನವನ್ನು ಅನುಮತಿ ಇಲ್ಲದೆ ಬಳಸುತ್ತಿರುವುದರಿಂದ ಅವರು ನೊಂದಿದ್ದಾರೆ‘ ಎಂದು ನ್ಯಾಯಾಲಯ ಹೇಳಿದೆ.

‘ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ನಿಮಗೆ ಸಣ್ಣ ವಿಚಾರ ಹೇಳುತ್ತೇನೆ. ಕೆಲವರು ಅಮಿತಾಭ್‌ ಅವರ ಚಿತ್ರ ಇರುವ ಟಿ–ಶರ್ಟ್‌ಗಳನ್ನು ಮಾಡುತ್ತಿದ್ದಾರೆ, ಕೆಲವರು ನನ್ನ ಪೋಸ್ಟರ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಇನ್ನು ಯಾರೋ amitabhbachchan.com ಎನ್ನುವ ಡೊಮೈನ್‌ ನೋಂದಣಿ ಮಾಡಿದ್ದಾರೆ. ಹೀಗಾಗಿ ನಾವು ಕೋರ್ಟ್‌ಗೆ ಬಂದೆವು‘ ಎಂದು ಅಮಿತಾಭ್‌ ಪರ ಹಾಜರಾದ ವಕೀಲ ಹರೀಶ್‌ ಸಾಳ್ವೆ ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com