ಮಾಜಿ ಟ್ವಿಟರ್ ಮುಖ್ಯಸ್ಥರ ಅವನತಿಯನ್ನು ನಾನು ಬಹಳ ಹಿಂದೆಯೇ ಊಹಿಸಿದ್ದೆ: ಕಂಗನಾ ರಣಾವತ್

ಟ್ವಿಟರ್ ಮುಖ್ಯಸ್ಥರ ಅವನತಿಯನ್ನು ನಾನು ಬಹಳ ಹಿಂದೆಯೇ ಊಹಿಸಿದ್ದೆ ಎಂದು ಹೇಳುವ ಮೂಲಕ ಟ್ವಿಟರ್ ಮುಖ್ಯಸ್ಥರಿಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಟಾಂಗ್ ನೀಡಿದ್ದಾರೆ.
ಕಂಗನಾ ರಣಾವತ್
ಕಂಗನಾ ರಣಾವತ್

ನವದೆಹಲಿ: ಟ್ವಿಟರ್ ಮುಖ್ಯಸ್ಥರ ಅವನತಿಯನ್ನು ನಾನು ಬಹಳ ಹಿಂದೆಯೇ ಊಹಿಸಿದ್ದೆ ಎಂದು ಹೇಳುವ ಮೂಲಕ ಟ್ವಿಟರ್ ಮುಖ್ಯಸ್ಥರಿಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಟಾಂಗ್ ನೀಡಿದ್ದಾರೆ.

ಖ್ಯಾತ ಮೈಕ್ರೋಬ್ಲಾಗಿಂಗ್ ಜಾಲತಾಣ ಟ್ವಿಟರ್ ಅನ್ನು ಖ್ಯಾತ ಉದ್ಯಮಿ ಹಾಗೂ ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಎಲಾನ್ ಮಸ್ಕ್ ತಮ್ಮತೆಕ್ಕೆಗೆ ತೆಗೆದುಕೊಂಡ ಬೆನ್ನಲ್ಲೇ ಸಂಸ್ಛೆಯ ಪ್ರಮುಖ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಿದ್ದರು. ಈ ಪೈಕಿ ಭಾರತ ಮೂಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ (CEO) ಮತ್ತು ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದ ಪರಾಗ್ ಅಗರ್ವಾಲ್, ಸಿಎಫ್‌ಒ ನೆಡ್ ಸೆಗಲ್, ಕಾನೂನು ವ್ಯವಹಾರಗಳು ಮತ್ತು ನೀತಿ ಮುಖ್ಯಸ್ಥ ವಿಜಯ ಗಡ್ಡೆ ಸೇರಿದಂತೆ ಹಲವು ಅಧಿಕಾರಿಗಳನ್ನು ಮಸ್ಕ್ ವಜಾ ಮಾಡಿದ್ದರು. 

ಇದೇ ವಿಚಾರವಾಗಿ ಇದೀಗ ನಟಿ ಕಂಗನಾ ರಣಾವತ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಈ ಕುರಿತು ತಮ್ಮ ಇನ್ ಸ್ಚಾ ಗ್ರಾಮ್ ನಲ್ಲಿ ಪೋಸ್ಟ್ ಹಾಕಿರುವ ನಟಿ ಕಂಗನಾ, ಟ್ವಿಟರ್ ಮುಖ್ಯಸ್ಥರ ಅವನತಿಯನ್ನು ನಾನು ಬಹಳ ಹಿಂದೆಯೇ ಊಹಿಸಿದ್ದೆ ಎಂದು ಹೇಳಿದ್ದಾರೆ.

'ದೂರದ ಭವಿಷ್ಯದಲ್ಲಿ ನಡೆಯುವ ವಿಷಯಗಳನ್ನು ಊಹಿಸುವ ಶಕ್ತಿ ತನಗೆ ಇದೆ.. ನಾನು ಯಾವಾಗಲೂ ದೂರದ ಭವಿಷ್ಯದಲ್ಲಿ ಇನ್ನೂ ಸಂಭವಿಸುವ ವಿಷಯಗಳನ್ನು ಊಹಿಸುತ್ತೇನೆ ... ಕೆಲವರು ನನ್ನ ದೂರದೃಷ್ಟಿಯನ್ನು X ಕಿರಣಗಳು ಎಂದು ಕರೆಯುತ್ತಾರೆ. ಕೆಲವರು ಅವುಗಳನ್ನು ನನ್ನ ಶಾಪಗಳು ಮತ್ತು ಕೆಲವರು ಅವುಗಳನ್ನು ವಾಮಾಚಾರ ಎಂದು ಕರೆಯುತ್ತಾರೆ ... ನಾವು ಎಷ್ಟು ಸಮಯದವರೆಗೆ ಮಹಿಳೆಯ ಪ್ರತಿಭೆಯನ್ನು ಈ ರೀತಿ ತಳ್ಳಿಹಾಕುತ್ತೇವೆ.. ಭವಿಷ್ಯವನ್ನು ಊಹಿಸಲು ಇದು ಸುಲಭವಲ್ಲ, ಇದು ಗಮನಾರ್ಹವಾದ ಗುರುತಿಸುವಿಕೆ ಮತ್ತು ಮಾನವ ಸಹಜವಾದ ವ್ಯಾಖ್ಯಾನವನ್ನು ತೆಗೆದುಕೊಳ್ಳುತ್ತದೆ. ...ಎಲ್ಲಕ್ಕಿಂತ ಹೆಚ್ಚಾಗಿ, ಒಬ್ಬರು ಊಹಿಸಲು ಬಯಸುವ ವಿಷಯವನ್ನು ಅಧ್ಯಯನ ಮಾಡಲು ಸ್ಫಟಿಕ ಸ್ಪಷ್ಟ ವಸ್ತುನಿಷ್ಠತೆಗಾಗಿ ಒಬ್ಬರ ಸ್ವಂತ ಇಷ್ಟಗಳು ಮತ್ತು ಇಷ್ಟಪಡದಿರುವಿಕೆಗಳನ್ನು ಕರಗಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ನಿಯಮ ಉಲ್ಲಂಘನೆ: ಕಂಗನಾ ಖಾತೆ ಅಮಾನತು ಮಾಡಿದ್ದ ಟ್ವಿಟರ್
ಇನ್ನು ಮೇ 2021 ರಲ್ಲಿ, ಕಂಗನಾ ಅವರ ಟ್ವಿಟರ್ ಖಾತೆಯನ್ನು 'ಟ್ವಿಟರ್ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಾಗಿ ಶಾಶ್ವತವಾಗಿ ಅಮಾನತುಗೊಳಿಸಲಾಗಿತ್ತು. ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಗೆಲುವು ಹಿಂಸಾಚಾರಕ್ಕೆ ಕಾರಣವಾಯಿತು ಎಂದು ನಟಿ ಮಾಡಿದ್ದ ಪೋಸ್ಟ್ ಹಿನ್ನಲೆಯಲ್ಲಿ ಟ್ವಿಟರ್ ಸಂಸ್ಥೆ ಅವರ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಿತ್ತು.

ಟ್ವಿಟರ್ ಸಂಸ್ಥೆಯ ಈ ಕ್ರಮವನ್ನು ನಟಿ ಕಂಗನಾ ಬಹಿರಂಗವಾಗಿಯೇ ಟೀಕಿಸಿದ್ದರು. ಈ ಕುರಿತು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಸರಣಿ ಪೋಸ್ಟ್ ಗಳ ಮೂಲಕ ಟೀಕಿಸಿದ್ದರು. ಇತ್ತೀಚಿನ ಬೆಳವಣಿಗೆಯಲ್ಲಿ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡಾಗಿನಿಂದ, ನಟಿ ಕಂಗನಾ ತನ್ನ ಅಮಾನತುಗೊಂಡ ಟ್ವಿಟರ್ ಖಾತೆಯನ್ನು ಶೀಘ್ರದಲ್ಲೇ ಮರಳಿ ಪಡೆಯುತ್ತೇನೆ ಎಂದು ಆಶಿಸುತ್ತಿದ್ದಾರೆ.

ಸದ್ಯ ಕಂಗನಾ ಅವರ ಬಹು ನಿರೀಕ್ಷಿತ ʼಎಮರ್ಜೆನ್ಸಿ” ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರಲ್ಲಿ ಅವರು ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರ ಪಾತ್ರವನ್ನು ಮಾಡಲಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com