ಅಮೀರ್ ಖಾನ್ ಪುತ್ರಿ ಇರಾ- ನೂಪುರ್ ಶಿಖರೆ ದಾಂಪತ್ಯ ಜೀವನಕ್ಕೆ ಪ್ರವೇಶ!

ಸೂಪರ್ ಸ್ಟಾರ್ ಅಮೀರ್ ಖಾನ್ ಮತ್ತು ನಿರ್ಮಾಪಕಿ ರೀನಾ ದತ್ತಾ ಅವರ  ಪುತ್ರಿ ಇರಾ ಖಾನ್ ಬುಧವಾರ ತಮ್ಮ ಬಹುಕಾಲದ ಸಂಗಾತಿ ನೂಪುರ್ ಶಿಖರೆ ಅವರನ್ನು ವಿವಾಹವಾಗಿದ್ದಾರೆ.
ಅಮೀರ್ ಖಾನ್ ಪುತ್ರಿ ಇರಾ-ನೂಪುರ್ ಶಿಖರೆ ಮದುವೆ ಚಿತ್ರ
ಅಮೀರ್ ಖಾನ್ ಪುತ್ರಿ ಇರಾ-ನೂಪುರ್ ಶಿಖರೆ ಮದುವೆ ಚಿತ್ರ

ಮುಂಬೈ: ಸೂಪರ್ ಸ್ಟಾರ್ ಅಮೀರ್ ಖಾನ್ ಮತ್ತು ನಿರ್ಮಾಪಕಿ ರೀನಾ ದತ್ತಾ ಅವರ  ಪುತ್ರಿ ಇರಾ ಖಾನ್ ಬುಧವಾರ ತಮ್ಮ ಬಹುಕಾಲದ ಸಂಗಾತಿ ನೂಪುರ್ ಶಿಖರೆ ಅವರನ್ನು ವಿವಾಹವಾಗಿದ್ದಾರೆ.

ಮಾನಸಿಕ ಆರೋಗ್ಯ ಬೆಂಬಲ ಸಂಸ್ಥೆಯ ಸಂಸ್ಥಾಪಕಿ ಮತ್ತು ಸಿಇಒ ಆಗಿರುವ ಇರಾ ಅವರು ಸೆಲೆಬ್ರಿಟಿ ಫಿಟ್‌ನೆಸ್ ತರಬೇತುದಾರರಾದ ನೂಪುರ್ ಅವರೊಂದಿಗೆ ಉಪನಗರ ಬಾಂದ್ರಾದಲ್ಲಿನ ಪಂಚತಾರಾ ಹೋಟೆಲ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮದುವೆಯಲ್ಲಿ ಅಮೀರ್, ಅವರ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಸೇರಿದಂತೆ ಅವರ ಕುಟುಂಬ ಸದಸ್ಯರು ಭಾಗವಹಿಸಿದ್ದರು. ಸಮಾರಂಭದ ನಂತರ ಅದೇ ಹೋಟೆಲ್‌ನಲ್ಲಿ ಆರತಕ್ಷತೆ ನಡೆಯಿತು. 26 ವರ್ಷದ ಇರಾ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರು.

ಜನವರಿ 8 ರಂದು ಉದಯಪುರದಲ್ಲಿ ದಂಪತಿಗಳು ಮತ್ತೊಂದು ವಿವಾಹ ಸಮಾರಂಭವನ್ನು ನಡೆಸಲಿದ್ದಾರೆ, ನಂತರ ಜನವರಿ 13 ರಂದು ಮುಂಬೈನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ. ಮೂರು ವರ್ಷಗಳಿಂದ ಸಂಬಂಧದಲ್ಲಿರುವ ಇರಾ ಮತ್ತು ನೂಪುರ್ ನವೆಂಬರ್ 2023 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com