ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಪ್ರಿವೆಡ್ಡಿಂಗ್: ವೇದಿಕೆ ಮೇಲೆ ಜೈ ಶ್ರೀರಾಮ್ ಎಂದ ಶಾರೂಖ್ ಖಾನ್!

ಸಲ್ಮಾನ್,ಶಾರೂಖ್, ಅಮೀರ್ ಖಾನ್ ಗಳೊಂದಿಗೆ ರಾಮ್ ಚರಣ್ ನೃತ್ಯ
ಸಲ್ಮಾನ್,ಶಾರೂಖ್, ಅಮೀರ್ ಖಾನ್ ಗಳೊಂದಿಗೆ ರಾಮ್ ಚರಣ್ ನೃತ್ಯ

ಜಾಮ್ ನಗರ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ 28 ವರ್ಷದ ಅನಂತ್ ಅಂಬಾನಿ, ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ 29 ವರ್ಷದ ರಾಧಿಕಾ ಮರ್ಚೆಂಟ್ ಅವರ ಪ್ರಿವೆಡ್ಡಿಂಗ್ ಸಮಾರಂಭ ಜಾಮ್‌ನಗರದಲ್ಲಿ ನಡೆಯುತ್ತಿದೆ.

ಈ ಸಮಾರಂಭದ ಎರಡನೇ ದಿನದಂದು ಬಾಲಿವುಡ್ ನ ಮೂವರು ಖಾನ್ ಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ್ದಾರೆ. ಇದೇ ವೇಳೆ ಆಸ್ಕರ್ ವಿಜೇತ ಆರ್ ಆಆರ್ ನ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ್ದಾರೆ. RRR ಸ್ಟಾರ್ ರಾಮ್ ಚರಣ್ ಅವರ ಸಹಾಯದಿಂದ ನಾಟು ನಾಟು ಹಾಡಿಗೆ ಮೂವರು ಖಾನ್ ಗೆ ಡ್ಯಾನ್ಸ್ ಮಾಡಿದ್ದಾರೆ. ಆದರೆ, ಇದು ಯೋಜನೆ ಪ್ರಕಾರ ನಡೆಯದಿದ್ದಾಗ, ಸಲ್ಮಾನ್ ಖಾನ್ , ಅಮೀರ್ ಖಾನ್, ಶಾರೂಕ್ ಖಾನ್ ಸೇರಿ ಮುಜ್ಸೆ ಶಾದಿ ಕರೋಗಿಯ' ಅವರ ಹಿಟ್ ಹಾಡು ಜೀನೆ ಕೆ ಹೈ ಚಾರ್ ದಿನ್ ಹಾಡಿಗೆ ಟವಲ್ ಡ್ಯಾನ್ಸ್ ಮಾಡಿದ್ದಾರೆ. ನಂಚರ ರಂಗ್ ದೇ ಬಸಂತಿ, ದಿಲ್ ಸೆ ಚಿತ್ರದ ಹಾಡುಗಳಿಗೆ ಸ್ಪೆಪ್ ಹಾಕಿದ್ದಾರೆ.

ಇದೇ ವೇಳೆ ಶಾರುಖ್ ಅವರು ಅಂಬಾನಿ ಕುಟುಂಬದ ಮೂವರು ಹಿರಿಯ ಮಹಿಳೆಯರಾದ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ, ಪೂರ್ಣಿಮಾ ದಲಾಲ್ (ನೀತಾ ಅಂಬಾನಿಯವರ ತಾಯಿ) ಮತ್ತು ದೇವಯಾನಿ ಖಿಮ್ಜಿ (ವ್ಯಾಪಾರಿ ತಾತನ ಪತ್ನಿ) ಅವರನ್ನು ಪರಿಚಯಿಸುತ್ತಿದ್ದಂತೆ ಶಾರೂಖ್ ಖಾನ್ 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com