OTTಯಿಂದಲೂ 'ಸಟ್ಲುಜ್' ಹೊರಕ್ಕೆ: ಕಾರಣ ಇದೇನಾ? ನಟ ದಿಲ್ಜಿತ್ ದೋಸಾಂಜ್ ಮೊದಲ ಪ್ರತಿಕ್ರಿಯೆ...

ಆರಂಭದಲ್ಲಿ 'ಪಂಜಾಬ್ 95' ಎಂದು ಹೆಸರಿಡಲಾಗಿದ್ದ ಈ ಸಿನಿಮಾ ವರ್ಷಗಳ ಕಾಲ ವಿಳಂಬವಾಗಿ ಕಳೆದ ಶುಕ್ರವಾರ ZEE5 ನಲ್ಲಿ ಸಟ್ಲಜ್ ಎಂಬ ಶೀರ್ಷಿಕೆಯಡಿಯಲ್ಲಿ ಬಿಡುಗಡೆಯಾಯಿತು.
Diljit Dosanjh
ದಿಲ್ಜಿತ್ ದೋಸಾಂಜ್
Updated on

ದಿಲ್ಜಿತ್ ದೋಸಾಂಜ್ ನಟನೆಯ ಬಹುನಿರೀಕ್ಷಿತ ಸಟ್ಲುಜ್ ಚಿತ್ರ ZEE5 ನಲ್ಲಿ ಬಿಡುಗಡೆಯಾದ ಎರಡೇ ದಿನಕ್ಕೆ ಅದನ್ನು ತೆಗೆದುಹಾಕಲಾಗಿದೆ. ಸಿನಿಮಾದಲ್ಲಿ ಕೆಲವು ಭಾಗಗಳನ್ನು ಭಾರತ ವಿರೋಧಿ ಪಡೆಗಳು ದುರುಪಯೋಗಪಡಿಸಿಕೊಳ್ಳಬಹುದು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಆರಂಭದಲ್ಲಿ 'ಪಂಜಾಬ್ 95' ಎಂದು ಹೆಸರಿಡಲಾಗಿದ್ದ ಈ ಸಿನಿಮಾ ವರ್ಷಗಳ ಕಾಲ ವಿಳಂಬವಾಗಿ ಕಳೆದ ಶುಕ್ರವಾರ ZEE5 ನಲ್ಲಿ ಸಟ್ಲಜ್ ಎಂಬ ಶೀರ್ಷಿಕೆಯಡಿಯಲ್ಲಿ ಬಿಡುಗಡೆಯಾಯಿತು. ಕೆಲ ದೃಶ್ಯಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರ ಅದನ್ನು OTT ಯಿಂದ ತೆಗೆದುಹಾಕಲಾಯಿತು ಎಂದು ಮೂಲಗಳು ತಿಳಿಸಿವೆ.

ಮೊದಲಿಗೆ ಥಿಯೇಟರ್ ನಲ್ಲಿ ಬಿಡುಗಡೆಗೆ ಚಿತ್ರ ತಂಡ ಅರ್ಜಿ ಸಲ್ಲಿಸಿತ್ತು. ಆದರೆ ಪ್ರಸ್ತುತ ರೂಪದಲ್ಲಿ ಬಿಡುಗಡೆ ಮಾಡಲು ಒಪ್ಪಿಗೆ ಸಿಗದ ಹಿನ್ನೆಲೆಯಲ್ಲಿ OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿನ ಕೆಲವು ಭಾಗಗಳ ಬಗ್ಗೆ ಕಳವಳವಿತ್ತು.ಅವುಗಳನ್ನು "ಭಾರತ ವಿರೋಧಿ ಪಡೆಗಳು ದುರುಪಯೋಗಪಡಿಸಿಕೊಳ್ಳಬಹುದು" ಎಂಬ ಕಾರಣಕ್ಕೆ ZEE5 ನಲ್ಲಿ ತೆಗೆದುಹಾಕಲಾಗಿದೆ ಎಂದು ಮೂಲಗಳು ಹೇಳಿವೆ.

'ಸಟ್ಲುಜ್' ಪಂಜಾಬ್‌ನಲ್ಲಿ ಉಗ್ರಗಾಮಿತ್ವವು ಉತ್ತುಂಗದಲ್ಲಿದ್ದಾಗ ಕಾನೂನುಬಾಹಿರ ಹತ್ಯೆಗಳನ್ನು ಬಯಲಿಗೆಳೆಯಲು ಕಾರ್ಯಕರ್ತನೊಬ್ಬ ನಡೆಸಿದ ಹೋರಾಟವನ್ನು ಆಧರಿಸಿದೆ.

'ಸಟ್ಲುಜ್' OTTಯಿಂದ ತೆಗೆದುಹಾಕಿದ ಬಗ್ಗೆ ನಟ ದಿಲ್ಜಿತ್ ದೋಸಾಂಜ್, ಸಾಮಾಜಿಕ ಜಾಲತಾಣ ಇನ್ಸಾಟಾಗ್ರಾಮ್ ನಲ್ಲಿ cryptic ಪೋಸ್ಟ್ ಹಂಚಿಕೊಳ್ಳುವ ಮೂಲಕ ಮೌನ ಮುರಿದಿದ್ದಾರೆ. ಶಹೀದ್ ಜಸ್ವಂತ್ ಸಿಂಗ್ ಖಲ್ರಾ ಅವರಿಗೂ ಇದೇ ರೀತಿ ಆಗಿತ್ತು. I Challenge the Darkness ಎಂದು ಬರೆದುಕೊಂಡಿದ್ದಾರೆ.

Diljit Dosanjh
ದಿಲ್ಜಿತ್ ದೋಸಾಂಜ್ ನಟನೆಯ 'ಸಟ್ಲುಜ್' ಬಿಡುಗಡೆಯಾಗಿ ಕೇವಲ 2 ದಿನಕ್ಕೆ OTTಯಿಂದಲೂ ಹೊರಕ್ಕೆ, ಚಿತ್ರದಲ್ಲಿ ಅಂತದ್ದೇನಿದೆ?

ಸಟ್ಲುಜ್ ಬಿಡುಗಡೆಯಾದಾಗಿನಿಂದ ಚಿತ್ರಕ್ಕೆ ಬಂದ ಪ್ರತಿಕ್ರಿಯೆ ನಿಜಕ್ಕೂ ಅಗಾಧವಾಗಿದೆ. ಚಿತ್ರವನ್ನು ಚಂದಾದಾರರಾಗಲು, ವೀಕ್ಷಿಸಲು ಮತ್ತು ಬೆಂಬಲಿಸಲು ಆಯ್ಕೆ ಮಾಡಿದ ಪ್ರತಿಯೊಬ್ಬ ವೀಕ್ಷಕರಿಗೂ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ನಿಮ್ಮ ಪ್ರೀತಿ ಮತ್ತು ಬೆಂಬಲ ಬಹಳ ಮಹತ್ವದ್ದಾಗಿದೆ" ಎಂದು ZEE5 ಹೇಳಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com