

ಸುಲ್ತಾನ್‌ಪಾಳ್ಯದ ಬಬಲ್‌ಗಮ್ ಫ್ಯಾಕ್ಟರಿಯಲ್ಲಿ ಇತ್ತೀಚೆಗೆ 'ಅಲೆಮಾರಿ' ಸಂತು ನಿರ್ದೇಶನದ 'ಡವ್' ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಆರುದಿನಗಳ ಟಾಕಿ ಪೋರ್ಷನ್ ಮತ್ತು 5 ಹಾಡುಗಳ ಚಿತ್ರೀಕರಣ ಮುಗಿದರೆ 'ಡವ್'ಗೆ ಕುಂಬಳಕಾಯಿ. ಚಿತ್ರದ ನಾಯಕ ಅನೂಪ್ ಸಾರಾ ಗೋವಿಂದು, ನಾಯಕಿ ಅದಿತಿ, ಶರತ್ ಲೋಹಿತಾಶ್ವ, ನಿರ್ಮಾಪಕ ಬಿ.ಕೆ.ಶ್ರೀನಿವಾಸ್ ಅಲ್ಲಿದ್ದರು. 'ಅಲೆಮಾರಿ'ಗಾಗಿ ಸಂತುಗೆ ಕೊಟ್ಟ ಬಜೆಟ್‌ನಲ್ಲಿ ಬರಗೂರು ರಾಮಚಂದ್ರ ಅವರ 8 ಸಿನಿಮಾ ಮಾಡಬಹುದಿತ್ತು ಎಂದ ಶ್ರೀನಿವಾಸ್ ಈ ಚಿತ್ರಕ್ಕೆ ಎಚ್ಚರಿಕೆಯಿಂದ ಹಣ ಹಾಕುತ್ತಿರುವುದನ್ನು ಸೂಚ್ಯವಾಗಿ ಹೇಳಿದರು. ಈ ಸಿನಿಮಾದಿಂದ ನಿರ್ಮಾಪಕರು ಹಣ ಮಾಡದಿದ್ದರೆ ಇನ್ನು ಮುಂದೆ ನನ್ನ ಜೊತೆ ಅವರು ಸಿನಿಮಾ ಮಾಡೋದು ಬೇಡ ಎಂಬುದು ನಿರ್ದೇಶಕ ಸಂತು ಆತ್ಮವಿಶ್ವಾಸ.