ಸಿನಿಮಾ ಲೇಖನ

ಇದು ಆಚಾರಿ ಕಥೆ

ಹುಡುಗಿಯರೇ ಸೇರಿ ಮಾಡುತ್ತಿರುವ 'ರಿಂಗ್‌ರೋಡ್ ಶುಭಾ' ಚಿತ್ರದ ಕಥೆ ಏನು ಎಂಬುದರ ಬಗ್ಗೆ, ಚಿತ್ರೀಕರಣ ಮುಗಿದು ಚಿತ್ರ...

ಇದು ಆಚಾರಿ ಕಥೆ
Published On :

ಹುಡುಗಿಯರೇ ಸೇರಿ ಮಾಡುತ್ತಿರುವ 'ರಿಂಗ್‌ರೋಡ್ ಶುಭಾ' ಚಿತ್ರದ ಕಥೆ ಏನು ಎಂಬುದರ ಬಗ್ಗೆ, ಚಿತ್ರೀಕರಣ ಮುಗಿದು ಚಿತ್ರ ಬಿಡುಗಡೆಗೆ ಸಿದ್ಧವಾದರೂ ಪ್ರಶ್ನೆಗಳು ಉಳಿದುಕೊಂಡಿವೆ. ಮೊದ ಮೊದಲು ಇದು ಸತ್ಯ ಪ್ರಕರಣದ ಆಧಾರಿತ ಚಿತ್ರ ಎಂದೆನಿಸಿದರೂ ನಂತರ ಚಿತ್ರತಂಡಕ್ಕೆ ಆದ ಸ್ಟಾರ್ ನಟ ನಟಿಯರ ಸೇರ್ಪಡೆಯಿಂದಾಗಿ ಕಥೆ ಬದಲಾಯಿಸಲಾಗಿದೆಯಾ ಎಂಬ ಅನುಮಾನಗಳು ಹುಟ್ಟಿದ್ದವು. ಆದರೆ ಅದೆಲ್ಲವೂ ಅನುಮಾನದ ಹಂತದಲ್ಲೇ ಉಳಿದುಹೋಗಿ ಯಾವುದಕ್ಕೂ ಸ್ಪಷ್ಟ ಉತ್ತರ ಸಿಕ್ಕಿರಲಿಲ್ಲ. ಆದರೀಗ ಪ್ರಿಯಾ ಬೆಳ್ಳಿಯಪ್ಪ ನಿರ್ದೇಶನದ ರಿಂಗ್‌ರೋಡ್ ಶುಭಾ ಚಿತ್ರದ ಕಥೆಯ ಬಗ್ಗೆ ಸುಳಿವು ಸಿಗದಿದ್ದರೂ ಅದನ್ನು ಬರೆದವರು ಯಾರು ಎಂಬ ಪ್ರಶ್ನೆಗೆ ಮತ್ತಷ್ಟು ಕುತೂಹಲ ಹುಟ್ಟಿಸುವ ಉತ್ತರ ದೊರೆತಿದೆ.
ಅಂದಹಾಗೆ ಈ ಕಥೆ ಬರೆದಿರುವ ವ್ಯಕ್ತಿ ಈಗ ಬದುಕಿಲ್ಲ ಎಂಬುದು ಇನ್ನೊಂದು ಸತ್ಯ. ಹೌದು ಆಚಾರಿ ಎಂಬ ವ್ಯಕ್ತಿ ಬರೆದ ಕಥೆಯನ್ನೇ ಆಧಾರವಾಗಿಟ್ಟುಕೊಂಡು ಈ ಹುಡುಗಿಯರ ತಂಡ ಸಿನಿಮಾ ಮಾಡುತ್ತಿದೆ ಎಂಬುದು ಇತ್ತೀಚೆಗೆ  ಲಭ್ಯವಾಗಿರುವ ನಿಖರ ಸುದ್ದಿ. ಆದರೆ ಈ ಆಚಾರಿ ಯಾರು ಎಂಬುದನ್ನು ಇಲ್ಲಿ ಹೇಳುವಂತಿಲ್ಲ. ಹೇಳಿದರೆ ಅದು ಚಿತ್ರತಂಡಕ್ಕೆ ತೊಡಕಾಗುವ ಸಂಭವವಿದೆ. ಏಕೆಂದರೆ ಈ ಕಥೆ ಬರೆದ ವ್ಯಕ್ತಿ ಈ ಕಥೆಯ ಒಂದು ಭಾಗವೂ ಹೌದು. ಹಾಗಾಗಿ, ಆಚಾರಿ ಎಂಬ ವ್ಯಕ್ತಿಯ ಪಾತ್ರವೂ ರಿಂಗ್‌ರೋಡ್ ಶುಭಾ ಚಿತ್ರದಲ್ಲಿ ಇರಲಿದೆಯಂತೆ. ಈತ ಯಾರು ಎಂಬುದನ್ನು ರಿಂಗ್‌ರೋಡ್ ಶುಭಾ ತಂಡ ಬಹುಶಃ ಚಿತ್ರ ಬಿಡುಗಡೆಯಾದ ಮೇಲೆ ಸ್ಪಷ್ಟಪಡಿಸಬಹುದು. ಈ ವ್ಯಕ್ತಿ ಈ ಕೇಸಿನ ಬಗ್ಗೆ ಬರೆದ ದಾಖಲೆ ರೂಪದ ಕಥೆ ರಿಂಗ್‌ರೋಡ್ ಶುಭಾ ಚಿತ್ರದ ಹೂರಣ. ಆದರೆ ಆ ವ್ಯಕ್ತಿ ಚಿತ್ರದ ಕ್ಲೈಮ್ಯಾಕ್ಸ್ ಬರೆದಿಲ್ಲದ ಕಾರಣ ಪ್ರಿಯಾ ಬೆಳ್ಳಿಯಪ್ಪ ತಂಡ ಆ ಭಾಗವನ್ನು ಮಾತ್ರ ತಾವೇ ಬರೆದುಕೊಂಡಿದ್ದಾರೆ ಎಂಬುದು ಸದ್ಯದ ಮಾಹಿತಿ. ಅಂತೂ, ಆರಂಭದಿಂದಲೂ ಇಂಥವೇ ವಿಷಯದಲ್ಲಿ ಸುದ್ದಿ ಮಾಡುತ್ತಿರುವ ರಿಂಗ್‌ರೋಡ್ ಶುಭಾ ಚಿತ್ರ ಇನ್ನು ಬಿಡುಗಡೆಯಾದ ಮೇಲೆ ಇನ್ನೆಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆಯೋ, ಎಷ್ಟು ಪ್ರಶ್ನೆಗಳಿಗೆ ಉತ್ತರ ಕೊಡುತ್ತದೆಯೋ ಗೊತ್ತಿಲ್ಲ.


-ಹರಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.