ತಮನ್ನಾ ಗೂಗ್ಲಿ
ಬಾಲಿವುಡ್‌ನಲ್ಲಿ ಕಾಂಟ್ರವರ್ಸಿ ಕ್ವೀನ್‌ಗಳಿಗೆ ಕೊರತೆ ಇಲ್ಲ. ಸಿನಿಮಾಕ್ಕೆ ಕಾಲಿಡೋ ಮುನ್ನ, ಸಿನಿಮಾ ಹಿಟ್ಟಾದ್ಮೇಲೂ ಒಂದಿಲ್ಲೊಂದು ವಿವಾದಗಳನ್ನು...

ಬಾಲಿವುಡ್‌ನಲ್ಲಿ ಕಾಂಟ್ರವರ್ಸಿ ಕ್ವೀನ್‌ಗಳಿಗೆ ಕೊರತೆ ಇಲ್ಲ. ಸಿನಿಮಾಕ್ಕೆ ಕಾಲಿಡೋ ಮುನ್ನ, ಸಿನಿಮಾ ಹಿಟ್ಟಾದ್ಮೇಲೂ ಒಂದಿಲ್ಲೊಂದು ವಿವಾದಗಳನ್ನು ಜೀವಂತವಾಗಿರಿಸಿಕೊಳ್ಳೋದು ಇವರ ಖಯಾಲಿ. ಮುಂಬೈ ಸಿನಿಲೋಕಕ್ಕೆ ಮೊನ್ನೆ ಮೊನ್ನೆ ಮತ್ತೆ ಕಾಲಿಟ್ಟ ತಮನ್ನಾ ಕೂಡ ಈ ಪರಂಪರೆಗೆ ಮುದ್ರೆಯೊತ್ತಿದಳು.
ಅಜಯ್ ದೇವಗನ್ ಜತೆಗಿನ 'ಹಿಮ್ಮತ್‌ವಾಲಾ' ಮುಂದಿನ ತಿಂಗಳು ತೆರೆಕಾಣಲಿದೆ. ಆದರೆ, ಈಕೆ ಚಿತ್ರದ ಪ್ರಮೋಷನ್‌ಗೆ ಹೋಗುತ್ತಿಲ್ಲವಂತೆ. ಈಗಾಗಲೇ ತೆಲುಗು- ತಮಿಳಿನಲ್ಲಿ 70-80 ಲಕ್ಷ ಸಂಭಾವನೆ ಏರಿಸಿಕೊಂಡ ತಮನ್ನಾ ಬಾಲಿವುಡ್ ಅನ್ನು ಅಷ್ಟು ಸೀರಿಯಸ್ಸಾಗಿ ತೆಗೆದುಕೊಳ್ತಿಲ್ಲ ಅನ್ನೋ ಆರೋಪವೂ ಉಂಟು. ಆದರೆ, ಇದಾವುದನ್ನೂ ಒಪ್ಪದ ತಮನ್ನಾ "ನಾನು ತೆಲುಗಿನ 'ಥಡಕಾ' ಮತ್ತು ಇನ್ನೊಂದು ತಮಿಳು ಚಿತ್ರದಲ್ಲಿ ಬ್ಯುಸಿಯಾಗಿದ್ದೀನಿ' ಎಂಬ ಸ್ಪಷ್ಟನೆ ಕೊಟ್ಟಿದ್ದಾಳೆ.
ಅಂದಹಾಗೆ, ತಮನ್ನಾಗೆ ಹಿಂದಿಯಲ್ಲಿ ಇದೇನು ಮೊದಲನೇ ಚಿತ್ರವಲ್ಲ. ಈಕೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದೇ ಹಿಂದಿಯ 'ಚಾಂದ್ ಸಾ ರೋಶನ್ ಚೆಹ್ರಾ' ಚಿತ್ರದಿಂದ. ಬಳಿಕ ತಮಿಳು- ತೆಲುಗಿನಲ್ಲಿ ತನ್ನದೇ ಛಾಪು ಮೂಡಿಸಿದಳು. 'ಕಲ್ಲೂರಿ', 'ಕೊಂಚೆಮ್ ಇಷ್ಟಂ ಕೊಂಚೆಮ್ ಕಷ್ಟಂ', 'ಪೈಯ್ಯಾ', 'ಹಂಡ್ರೆಡ್ ಪರ್ಸೆಂಟ್ ಲವ್' ಮೇಲಿಂದ ಮೇಲೆ ಬೆಸ್ಟ್ ಆ್ಯಕ್ಟ್ರೆಸ್ ಅವಾರ್ಡ್‌ಗಳೂ ಬಂದವು.
ದಕ್ಷಿಣ ಭಾರತದ ಇಂಡಸ್ಟ್ರಿಯಲ್ಲಿ ತಮನ್ನಾಳ ರೇಟು ಹೆಚ್ಚಲು ಇನ್ನೂ ಒಂದು ಕಾರಣ, ಕೊಹ್ಲಿಯೊಂದಿಗೆ ಇವಳಿಗಿರುವ ನಂಟು! 'ಸೆಲ್ಕಾನ್' ಮೊಬೈಲಿನ ಜಾಹೀರಾತಿನಲ್ಲಿ ವಿರಾಟ್ ಕೊಹ್ಲಿ ಈಕೆಯ ಹೆಸರನ್ನೇನೋ ಸೇವ್ ಮಾಡಿಕೊಳ್ತಾನೆ. ಹೀಗೆ ಸೇವ್ ಮಾಡ್ಕೊಂಡಿದ್ದು ಲವ್ವಿಗೂ ಕಾರಣವಾಯ್ತು ಅನ್ನೋದು ಗುಸುಗುಸು. ಮೊಬೈಲಿನಲ್ಲಿ ಇಬ್ಬರೂ ಗಂಟೆಗಟ್ಟಲೆ ಮಾತಾಡ್ತಾರೆ ಎಂಬ ಗಾಸಿಪ್ ಅನ್ನು ಬಲ್ಲಮೂಲಗಳೇ ಸೋರಿಕೆ ಮಾಡಿವೆ. ತಮನ್ನಾ ಜತೆ ಲವ್ವಿಗೆ ಬಿದ್ದ ಮೇಲೆ ಕೊಹ್ಲಿ ಫಾರ್ಮ್‌ನಲ್ಲೇ ಇಲ್ಲ ಎಂಬ ಆರೋಪವನ್ನೂ ವಿರಾಟ್ ಅಭಿಮಾನಿಗಳು ಮಾಡ್ತಾರೆ.
ಆದರೆ, ತಮನ್ನಾ ಅದಕ್ಕೆಲ್ಲ ತಲೆಕೆಡಿಸಿಕೊಳ್ತಿಲ್ಲ. ಕೊಹ್ಲಿ ವಿಕೆಟ್ ಸಿಕ್ಕೇ ಸಿಗುತ್ತದೆ ಎಂದು ಆಕೆಗೂ ಗೊತ್ತು. ಬಹುಶಃ ಇಷ್ಟೊಂದು ವಿಶ್ವಾಸ ಜಗತ್ತಿನ ಯಾವ ಬೌಲರ್‌ಗೂ ಇರಲಿಕ್ಕಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


