ನಯನ'ಕಾರ'

ದಕ್ಷಿಣದ ಬಹುತೇಕ ನಟಿಯರು ಬಾಲಿವುಡ್ನ ಬಾಗಿಲು ತಟ್ಟಿದ್ದಾಯ್ತು. ಆದರೆ, ಬಾಲಿವುಡ್ಡೇ ಮನೆ ಬಾಗಿಲಿಗೆ ಬಂದ್ರೂ 'ನಾ ಬರಲ್ಲ' ಅಂತ ಮುಖ ಓರೆ ಮಾಡಿದ ಸಿಂಗಾರಿ ಬಹುಶಃ ಅವಳೊಬ್ಬಳೇ. ಅದರಲ್ಲೂ ಶಾರುಖ್ಖಾನ್ನಂಥ ಕಿಂಗ್ನ ಜತೆ ನಟಿಸುವ ಅವಕಾಶವನ್ನೇ ಧಿಕ್ಕರಿಸಿ ಸುದ್ದಿಯಾಗಿದ್ದಾಳೆಂದರೆ ಅವಳ ಧಿಮಾಕೆಷ್ಟು ಲೆಕ್ಕ ಹಾಕಿ!
ನಯನತಾರಾಳ ವ್ಯಕ್ತಿತ್ವವೇ ಅಂಥದ್ದು. ಒಮ್ಮೆ ಬೇಡ ಅಂದ್ರೆ ಮುಗೀತು. ಜಪ್ಪಯ್ಯ ಅಂದ್ರೂ ಬೇಡ. ಪ್ರಭುದೇವ್ನ ವಿಚಾರದಲ್ಲೂ ಹಾಗೆಯೇ ಆಯ್ತು ಬಿಡಿ. ಆದರೆ, ಮೊನ್ನೆಯ ಕಥೆಯೇ ಬೇರೆ. ಶಾರುಖ್ ಮತ್ತು ದೀಪಿಕಾ ನಟಿಸುತ್ತಿರುವ 'ಚೆನ್ನೈ ಎಕ್ಸ್ಪ್ರೆಸ್' ಚಿತ್ರಕ್ಕೆ ಈಕೆಗೂ ಆಫರ್ ಬಂದಿತ್ತಂತೆ. ಮುಂಬೈನಿಂದ ರಾಮೇಶ್ವರಕ್ಕೆ ಪಯಣಿಸುವ ಸಂದರ್ಭದಲ್ಲಿ ನಡೆಯುವ ಘಟನೆಗಳ ಚಿತ್ರ ಈ 'ಚೆನ್ನೈ ಎಕ್ಸ್ಪ್ರೆಸ್'. ಅಲ್ಲೊಂದು ಐಟಂ ಸಾಂಗಿನ ಅಗತ್ಯವಿದ್ದಿದ್ದರಿಂದ ನಯನತಾರಾಳಿಗೆ ಈ ಆಫರ್ ಕೊಟ್ಟರು ನಿರ್ದೇಶಕ ರೋಹಿತ್ ಶೆಟ್ಟಿ. ಆದರೆ, ನಯನಾ ಇದಕ್ಕೆ ಒಪ್ಪಲೇ ಇಲ್ವಂತೆ. 'ನೋ ಬಾಲಿವುಡ್' ಎಂದು ಎರಡೇ ಪದಗಳಲ್ಲಿ ಅವಕಾಶ ತಳ್ಳಿಹಾಕಿದಳಂತೆ.
ಅವಳಿಗೇನು ಬಾಲಿವುಡ್ ಮೇಲೆ ದ್ವೇಷ ಅಂತಲ್ಲ. ಮಾಜಿ ಲವರ್ ಪ್ರಭುದೇವ 'ಎಬಿಸಿಡಿ' ಎಂದು 3ಡಿ ಎಫೆಕ್ಟಲ್ಲಿ ಬಿಂದಾಸಾಗಿ ಮಿಂಚುತ್ತಿರುವ ದಿನಗಳಲ್ಲಿ ಬಾಲಿವುಡ್ ಮೇಲೆ ಈಕೆಗೇನೋ ಸಣ್ಣ ಕೋಪ ಬಂದಿರಬೇಕಷ್ಟೇ. ಅದಕ್ಕಾಗಿ, ದಕ್ಷಿಣದಲ್ಲೇ ಇರುತ್ತೇನೆ ಅಂತ ಈ 'ಉತ್ತರ' ಕೊಟ್ಟಳೋ ಏನೋ? ಸದ್ಯ ತೆಲುಗಿನ ಒಂದು, ತಮಿಳಿನ ಮೂರು ಚಿತ್ರಗಳು ಈಕೆಯ ವ್ಯಾನಿಟಿ ಬ್ಯಾಗನ್ನು ಸೇರಿಕೊಂಡಿರೋದ್ರಿಂದ ಬ್ಯುಸಿಯ ಕಾರಣವೂ ಇದ್ದಿರಬಹುದು.
ನಯನಾ ಯಾವುದ್ಯಾವುದೋ ಕಾರಣ ಇಟ್ಕೊಂಡು 'ಕೆಂಪು' ಆಗ್ತಾಳೆ. ಸದ್ಯಕ್ಕಂತೂ ಆ ಕಾರಣ ಗೊತ್ತಾಗಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


