

ಲಂಡನ್: ಆಸ್ಕರ್ ಪ್ರಶಸ್ತಿ ವಿಜೇತೆ ಜೆನ್ನಿಫರ್ ಲಾರೆನ್ಸ್ ತನ್ನ ಆದರ್ಶ ಜೊತೆಗಾರ 'ಸ್ಥಿರತೆ'ಯಿಂದಿರಬೇಕು ಎಂದಿದ್ದಾರೆ. ನಾಲ್ಕು ತಿಂಗಳಿಂದ ಹಾಡುಗಾರ ಕ್ರಿಸ್ ಮಾರ್ಟಿನ್ ಜೊತೆ ಡೇಟಿಂಗ್ ನಡೆಸುತ್ತಿದ್ದು, ಈಗ ಸಂಬಂಧ ಮುರಿದು ಬಿದ್ದಿದೆ ಎನ್ನಲಾಗಿದೆ.
ಅಸ್ಥಿರ ಜೊತೆಗಾರನ ಜೊತೆ ಡೇಟ್ ಮಾಡುವುದಕ್ಕಿಂತ ಒಂಟಿಯಾಗಿ ಉಳಿಯುವುದೇ ಲೇಸು ಎಂದಿದ್ದಾರೆ ಈ "ಹಂಗರ್ ಗೇಮ್ಸ್" ಖಾತಿಯ ೨೪ ವರ್ಷದ ಚೆಲುವೆ ಜೆನ್ನಿಫರ್ ಲಾರೆನ್ಸ್.
ಈಗಾಗಲೇ ಬೇರ್ಪಟ್ಟಿರುವ ತನ್ನ ಹೆಂಡತಿ ಗ್ವೈನೆಥ್ ಪ್ಯಾಲ್ಟ್ರೊ ಅವರೊಂದಿಗೆ ಕ್ರಿಸ್ ಮಾರ್ಟಿನ್ ಇನ್ನೂ ತನ್ನ ಗೆಳೆತನವನ್ನು ಮುಂದುವರೆಸಿರುವುದೇ, ಈ ಸಂಬಂಧ ಮುರಿದು ಬೀಳಲು ಕಾರಣ ಎನ್ನಲಾಗಿದೆ. ಕ್ರಿಸ್ ಮಾರ್ಟಿನ್ ಅವರ ಹೆಂಡತಿಗೆ ಇಬ್ಬರು ಮಕ್ಕಳಿದ್ದಾರೆ.