'ಜ್ಯೋತಿ ಅಲಿಯಾಸ್ ಕೋತಿರಾಜ' ಪ್ರಥಮ ಪ್ರತಿ ಸಿದ್ಧ

'ಜ್ಯೋತಿ ಅಲಿಯಾಸ್ ಕೋತಿರಾಜ' ಚಿತ್ರದ ಸ್ಟಿಲ್
'ಜ್ಯೋತಿ ಅಲಿಯಾಸ್ ಕೋತಿರಾಜ' ಚಿತ್ರದ ಸ್ಟಿಲ್

ಸಾಮಾನ್ಯ ಮನುಷ್ಯನಾಗಿ ಹುಟ್ಟಿ ಅಸಮಾನ್ಯ ಸಾಹಸ ಮಾಡಿದ ಚಿತ್ರದುರ್ಗದ ಪ್ರತಿಭೆ ಕೋತಿರಾಜನ ಜೀವನ ಕಥೆಯನ್ನು ಹೊಂದಿರುವ 'ಜ್ಯೋತಿ ಅಲಿಯಾಸ್ ಕೋತಿರಾಜ' ಚಿತ್ರದ ಚಿತ್ರೀಕರಣೇತರ ಚಟುವಟಿಕೆಗಳೆಲ್ಲ ಮುಗಿದಿದ್ದು ಇದೀಗ ಪ್ರಥಮ ಪ್ರತಿ ಕೂಡಾ ಸಿದ್ಧವಾಗಿದೆ. ಡಿಸೆಂಬರ್ ತಿಂಗಳಲ್ಲಿ ಚಿತ್ರವು ಬಿಡುಗಡೆಯಾಗಲಿದೆ. ವಿ.ಜಿ.ಫಿಲಂಸ್ ಲಾಂಛನದಲ್ಲಿ ಶೈಲಾಡೇವಿಡ್ ಈ ಚಿತ್ರವನ್ನು ನಿಮರ್ಾಣ ಮಾಡಿದ್ದಾರೆ.

ಸೆಬಾಸ್ಟಿನ್ ಡೇವಿಡ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಮೋಹನ್ ಛಾಯಾಗ್ರಹಣ, ಸೆಬೆನ್ಸ್ಟಾರ್ಭಾಸ್ಕರ್ ಸಂಗಿತ, ಮಾಸ್ಮಾದ, ಕುಂಗ್ಪೂ ಬಾಲು ಸಾಹಸ, ಆರ್.ಶಿವಪ್ರಸಾದ್ಯಾದವ್ ಸಂಕಲನ, ತ್ರಿಭುವನ್, ಚಾಮರಾಜ ನೃತ್ಯ ನಿರ್ದೇಶನ,            ಡಾ. ದೊಡ್ಡರಂಗೇಗೌಡ, ನಾಗೇಶ್ ಸಾಹಿತ್ಯವಿದೆ, ಜ್ಯೋತಿರಾಜ್ (ಕೋತಿರಾಜ್), ಐಶಾನಿ, ದೀಪಿಕಾದಾಸ್, ರಮೇಶ್ಭಟ್, ಸಂಕೇತ್ಕಾಶಿ, ಲಕ್ಷ್ಮೀಚಂದ್ರಶೇಖರ್, ಶೋಭಲೋಲನಾಥ್, ಪ್ರಜ್ವಲ್, ಮಾ.ರವಿಕುಮಾರ್ ತಾರಾಬಳಗದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com