ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೀವನಾಧಾರಿತ ಚಲನಚಿತ್ರದಲ್ಲಿ ನಟಿಸಲು ಬಾಲಿವುಡ್ ನಟ ಪರೇಶ್ ರಾವಲ್ ತೀವ್ರ ಉತ್ಸುಕರಾಗಿದ್ದಾರೆ. ಇದು ಅತಿ ದೊಡ್ಡ ಜವಾಬ್ದಾರಿ ಎಂದು ಬಣ್ಣಿಸಿದ್ದಾರೆ.
ಇನ್ನು ಹೆಸರಿಡದ ಈ ಚಲನಚಿತ್ರ ಆಗಸ್ಟ್ ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. 'ಓ ಮೈ ಗಾಡ್' ನಂತರ ಅವರು ನಿರ್ಮಿಸುತ್ತಿರುವ ಎರಡನೆ ಸಿನೆಮಾ ಇದು .
"ನರೇಂದ್ರ ಮೋದಿ ಅವರ ಜೀವನಾಧಾರಿತ ಸಿನೆಮಾದ ಚಿತ್ರೀಕರಣ ಆಗಸ್ಟ್ ನಲ್ಲಿ ಪ್ರಾರಂಭವಾಗಲಿದೆ. ಇಂತಹ ದೊಡ್ಡ ನಾಯಕನ ಪಾತ್ರವನ್ನು ಪ್ರತಿನಿಧಿಸುವುದು ಅತಿ ದೊಡ್ಡ ಜವಾಬ್ದಾರಿ. ನಾನು ಅವರ ಜೀವನಾಧಾರಿತ ಸಿನೆಮಾ ಮಾಡುತ್ತಿರುವುದು ಹಾಗೂ ಅವರ ಪಾತ್ರದಲ್ಲಿ ನಾನು ನಟಿಸುತ್ತಿರುವುದು ಅವರಿಗೆ ತಿಳಿದಿದೆ" ಎಮು ರಾವಲ್ ವರದಿಗಾರರಿಗೆ ತಿಳಿಸಿದ್ದಾರೆ.
ಈ ಸಿನೆಮಾಗೆ ಚಿತ್ರೀಕರಣದ ಪ್ರಾರಂಭಕ್ಕೂ ಮೊದಲು ಬಹಳಷ್ಟು ಸಂಷೋಧನೆ ಮಾಡಲಿದ್ದೇನೆ, ಹಾಗು ಸುಮ್ಮನೆ ಅವರ ಹಾವಭಾವಗಳನ್ನು ಅಣಕಿಸುವುದಿಲ್ಲ ಎಂದು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ತಿಳಿಸಿದ್ದಾರೆ.