ಕ್ಯಾಪ್ಟನ್ ಅಮೇರಿಕ ಚಿತ್ರದ ಸ್ಪೈಡರ್ ಮ್ಯಾನ್ ನ ಫಸ್ಟ್ ಲುಕ್ ಸೋರಿಕೆ ?

ಕ್ಯಾಪ್ಟನ್ ಅಮೇರಿಕಾ: ಸಿವಿಲ್ ವಾರ್ ಹಾಗೂ ಇನ್ನೂ ಹೆಸರು ಅಂತಿಮವಾಗದ ಚಿತ್ರದಲ್ಲಿ ಸ್ಪೈಡರ್ ಮ್ಯಾನ್ ನ ಫಸ್ಟ್ ಲುಕ್ ಸೋರಿಕೆಯಾಗಿರುವ ಬಗ್ಗೆ ಮಾಹಿತಿ ಹರಿದಾಡುತ್ತಿದೆ.
ಕ್ಯಾಪ್ಟನ್ ಅಮೇರಿಕ ಚಿತ್ರದ ಸ್ಪೈಡರ್ ಮ್ಯಾನ್ ನ ಫಸ್ಟ್ ಲುಕ್ ಸೋರಿಕೆ ?
Updated on

ಲಾಸ್ ಏಂಜಲೀಸ್: ಕ್ಯಾಪ್ಟನ್ ಅಮೇರಿಕಾ: ಸಿವಿಲ್ ವಾರ್ ಹಾಗೂ ಇನ್ನೂ ಹೆಸರು ಅಂತಿಮವಾಗದ ಚಿತ್ರದಲ್ಲಿ ಸ್ಪೈಡರ್ ಮ್ಯಾನ್ ನ ಫಸ್ಟ್ ಲುಕ್ ಸೋರಿಕೆಯಾಗಿರುವ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಆನ್ ಲೈನ್ ವೆಬ್ ಸೈಟ್ ನಲ್ಲಿ ಹೊಸ ಸ್ಪೈಡರ್ ಮ್ಯಾನ್ ನ ಚಿತ್ರ ಸೋರಿಕೆಯಾಗಿದ್ದು ಇದೇ ಕ್ಯಾಪ್ಟನ್ ಅಮೆರಿಕಾದಲ್ಲಿರುವ ಸೂಪರ್ ಹಿರೋನ ಫಸ್ಟ್ ಲುಕ್ ಎಂದು ಹೇಳಲಾಗುತ್ತಿದೆ.

ಕಟ್ಟಡದ ಮೇಲಿನಿಂದ ಹೊಸ ಸ್ಪೈಡರ್ ಮ್ಯಾನ್ ನ ಚಿತ್ರ ತೆಗೆದಂತೆ ಕಾಣಿಸುತ್ತಿದ್ದು ಕ್ಯಾಪ್ಟನ್ ಅಮೇರಿಕಾ: ಸಿವಿಲ್ ವಾರ್ ನ ದೃಶ್ಯದಿಂದ ಈ ಚಿತ್ರ ತೆಗೆಯಲಾಗಿದೆ ಎಂಬ ವದಂತಿ ಹಬ್ಬಿದೆ. ಡಿಸ್ನಿಯ D23 ಸಮಾವೇಶದಲ್ಲಿ ಕ್ಯಾಪ್ಟನ್ ಅಮೇರಿಕಾ ಚಿತ್ರದ ಪ್ರದರ್ಶನ ನಡೆಯಲಿದೆ ಇದಕ್ಕಿಂತಲೂ ಮುನ್ನವೇ ತೀವ್ರ ಕುತೂಹಲ ಮೂಡಿಸಿದ್ದ ಯುವ ಸ್ಪೈಡರ್ ಮ್ಯಾನ್ ಲುಕ್ ಲೀಕ್ ಆಗಿದೆ.
ಕ್ಯಾಪ್ಟನ್ ಅಮೇರಿಕಾ ಚಿತ್ರದಲ್ಲಿ ಸಿವಿಲ್ ವಾರ್ ನಡೆಯುವ ವೇಳೆ ಸ್ಪೈಡರ್ ಮ್ಯಾನ್ ಪಾತ್ರದ ಪ್ರವೇಶವಾಗುವ ಹಿನ್ನೆಲೆಯಲ್ಲಿ ಈ ಚಿತ್ರದಲ್ಲಿ ಬರು ಸ್ಪೈಡರ್ ಮ್ಯಾನ್ ಪಾತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಇದೆ. ಆದರೆ ಫಸ್ಟ್ ಲುಕ್ ಸೋರಿಕೆಯಾಗಿರುವುದರ ಬಗ್ಗೆ ಈ ವರೆಗೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com