ಮಾದ ಮತ್ತು ಮಾನಸಿ ಚಿತ್ರದಲ್ಲಿ ಅನುಶ್ರೀ

ಮಾದ ಮತ್ತು ಮಾನಸಿ ಸಿನಿಮಾದ ಹಾಡೊಂದರಲ್ಲಿ ಕಾಣಿಸಿಕೊಂಡಿರುವುದು ಅಲ್ಲದೇ ಅನುಶ್ರೀ ಪ್ರಧಾನ ಪಾತ್ರದಲ್ಲೂ ನಟಿಸಲು ಒಪ್ಪಿದ್ದಾರೆ.
ನಟಿ ಅನುಶ್ರೀ
ನಟಿ ಅನುಶ್ರೀ

ನಟಿ ಅನುಶ್ರೀ ಇತ್ತೀಚಿನ ದಿನಗಳಲ್ಲಿ ಬೆಳ್ಳಿ ತೆರೆಯಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಮಾದ ಮತ್ತು ಮಾನಸಿ ಸಿನಿಮಾದ ಹಾಡೊಂದರಲ್ಲಿ ಕಾಣಿಸಿಕೊಂಡಿರುವುದು ಅಲ್ಲದೇ ಅನುಶ್ರೀ ಪ್ರಧಾನ ಪಾತ್ರದಲ್ಲೂ ನಟಿಸಲು ಒಪ್ಪಿದ್ದಾರೆ.

ಮಾಡ ಮತ್ತು ಮಾನಸಿ ಸಿನಿಮಾಗೆ ಸತೀಶ್ ಪ್ರಧಾನ್ ನಿರ್ದೇಶನ ಮಾಡಿದ್ದು, ಮನೋಮೂರ್ತಿ ನಿರ್ಮಾಣದಲ್ಲಿ ತಯಾರಾಗುತ್ತಿದೆ. ಪ್ರಜ್ವಲ್ ದೇವರಾಜ್ ಹಾಗೂ ಶ್ರುತಿ ಹರಿಹರನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.  ಚಿತ್ರದ ಪ್ರಮುಖ ಪಾತ್ರಗಳನ್ನು ಕಲಾತ್ಮಕವಾಗಿ ಪರಿಚಯಿಸಲು ನಿರ್ಧರಿಸಿದ್ದೇನೆ. ಹಾಡಿನಲ್ಲಿ ಅನುಶ್ರೀ ಮೂಲಕ ಚಿತ್ರದ ಪಾತ್ರಗಳನ್ನು ಪರಿಚಯಿಸಲಾಗುವುದು, ಮೊಘಲ್ ಲುಕ್ ನಲ್ಲಿ ಈ ಹಾಡನ್ನು ರೂಪಿಸಲಾಗಿದೆ ಎಂದು ನಿರ್ದೇಶಕ ಸತೀಶ್ ಪ್ರಧಾನ್ ಹೇಳಿದ್ದಾರೆ.  ರಾಕ್ ಲೈನ್ ಸ್ಟುಡಿಯೋದಲ್ಲಿ ಹಾಡಿನ ಸೆಟ್ ನಿರ್ಮಾಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com