ಕಟೀಲು ದೇವಸ್ಥಾನಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಭೇಟಿ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬಾಲಿವುಡ್‍ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಗುರುವಾರ ಸಂಜೆ ಭೇಟಿ ನೀಡಿ ಪೂಜೆ ಸಲ್ಲಿಸಿದರು...
ಕುಟುಂಬದೊಂದಿಗೆ ಶಿಲ್ಪಾ ಶೆಟ್ಟಿ
ಕುಟುಂಬದೊಂದಿಗೆ ಶಿಲ್ಪಾ ಶೆಟ್ಟಿ
Updated on: 
ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬಾಲಿವುಡ್‍ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಗುರುವಾರ ಸಂಜೆ  ಭೇಟಿ ನೀಡಿ ಪೂಜೆ ಸಲ್ಲಿಸಿದರು. 
ಪೂಜೆ ನಂತರ ಶಿಲ್ಪಾ ಶೆಟ್ಟಿ ಅವರು ನಿಡ್ಡೊಡಿ ಸಮೀಪದ ತಮ್ಮ ಕುಟುಂಬದ ಮನೆ ಮುದಲಾಡಿಗೆ ಭೇಟಿ ನೀಡಿದರು. ಮನೆಯಲ್ಲೂ  ಕುಟುಂಬದ ದೈವಗಳಿಗೆ ಪೂಜೆ ಸಲ್ಲಿಸಿದರು. ಮನೆಯಲ್ಲಿ ಮಾಡಿದ್ದ ನೀರು ದೋಸೆಯನ್ನು ಪುತ್ರ ವಿಯಾನ್‍ಗೆ ತಿನ್ನಿಸಿದರು. ಕರುವಿನೊಂದಿಗೆ ಕೆಲ ಹೊತ್ತು ಆಟವಾಡಿದರು. ಶಿಲ್ಪ ಶೆಟ್ಟಿ ಜೊತೆ ಪತಿ ರಾಜ್ ಕುಂದ್ರಾ, ತಂದೆ ಸುರೇಂದ್ರ ಶೆಟ್ಟಿ, ತಾಯಿ ಸುನಂದ ಶೆಟ್ಟಿ ಇದ್ದರು. ಶುಕ್ರವಾರ ಸುಬ್ರಮಣ್ಯಕ್ಕೆ ತೆರಳಲಿರುವ ಅವರು, ನಂತರ ಧರ್ಮಸ್ಥಳಕ್ಕೆ ಭೇಟಿ ನೀಡಿ ಭಾನುವಾರ ಮುಂಬೈಗೆ  ವಾಪಸಾಗಲಿದ್ದಾರೆ. 
ಕನ್ನಡದಲ್ಲಿ ಅವಕಾಶವಿದೆ; ಟೈಂ ಸಿಗ್ತಿಲ್ಲ: ಹಿಂದಿ ಸಿನಿಮಾದಲ್ಲಿಯೇ ಬ್ಯುಸಿ ಆಗಿದ್ದೇನೆ. ಕನ್ನಡದಲ್ಲಿ ಸಾಕಷ್ಟು ಅವಕಾಶಗಳಿವೆ. ನಟಿಸಲು ಸಮಯವಿಲ್ಲ. ತುಳು ಚಿತ್ರ ರಂಗ ತುಂಬಾ ಬೆಳೆದಿದೆ  ಎಂದು ಗೊತ್ತು. ಒಳ್ಳೆ ಕಥೆ ಮುಖ್ಯ. ಅದರಿಂದ ಸಿನಿಮಾ  ಹಿಟ್ ಆಗಲು ಸಾಧ್ಯ'' ಎಂದು ಶಿಲ್ಪ ಶೆಟ್ಟಿ ಹೇಳಿದ್ದಾರೆ. 
ತುಳುವಿನಲ್ಲಿ ಅವಕಾಶ ಸಿಕ್ಕಿದರೆ ನಟಿಸುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ನಟಿ, ತುಳು ಚಿತ್ರದ ಹಾಡುಗಳನ್ನು ನಾನು ಇಷ್ಟ ಪಡುತ್ತೇನೆ ಮುಖ್ಯವಾಗಿ ಕೋಟಿ ಚೆನ್ನಯ ಹಾಡುಗಳು ನನಗೆ ತುಂಬಾ ಇಷ್ಟ ಎಂದಷ್ಟೇ ಹೇಳಿದರು. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಪತಿ, ಉದ್ಯಮಿ ರಾಜ್ ಕುಂದ್ರಾ, ತಾಯಿ ಸುನಂದಾ ಶೆಟ್ಟಿ ಹಾಗೂ ಪುತ್ರ ವಿಯಾನ್ ಜೊತೆ ಗುರುವಾರ ಸಂಜೆ ಕಟೀಲು ಶ್ರೀ  ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅವರು ನಿಡ್ಡೋಡಿ ಗ್ರಾಮದ  ಮುದ್ರಾಡಿಗುತ್ತಿನ ತಮ್ಮ ಕುಟುಂಬದ ಮೂಲ ಮನೆಗೆ  ತೆರಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com